ಮಂಜುನಾಥ ಶೆಟ್ಟಿ…

ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.ಶಿವಮೊಗ್ಗ ನಗರದ ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ ಮೇಲೆ ಹೆಚ್ಚುತ್ತಿರುವ ಒತ್ತಡವನ್ನ ಖಂಡಿಸಿ ಜಿಲ್ಲಾಧ್ಯಕ್ಷ ಮಧು ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಮುಖ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರತಿನಿತ್ಯದ ಕೆಲಸದ ಜೊತೆ ಸಿಬ್ಬಂದಿ ವರ್ಗದವರು ಮಾಡುತ್ತಿರುವ ಕೆಲಸದಲ್ಲಿ ಹೆಚ್ಚಿನ ಒತ್ತಡವನ್ನ ಅಧಿಕಾರಿಗಳು ಹಾಕಬಾರದು ಪ್ರತಿನಿತ್ಯ ಬೆಳಗ್ಗೆ ಎಂಟರಿಂದ ರಾತ್ರಿ ಹನ್ನೊಂದು ಗಂಟೆ ತನಕ ಪ್ರತಿಯೊಬ್ಬ ಸಿಬ್ಬಂದಿ ವರ್ಗದವರು ಕೂಡ ಗೃಹ ಜ್ಯೋತಿ ಮರು ಪರಿಷ್ಕರಣೆ ಕಾರ್ಯನಿರ್ವಹಿಸುತ್ತಿದ್ದು ಇದರಿಂದ ಆ ಸಿಬ್ಬಂದಿ ವರ್ಗದವರಿಗೆ ಬಹಳ ಹೆಚ್ಚಿನ ಒತ್ತಡವನ್ನ ಮೇಲಧಿಕಾರಿಗಳು ಹಾಕುತ್ತಿದ್ದು ಪ್ರತಿನಿತ್ಯ ಕಾರ್ಯ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭದಲ್ಲಿ ಆಗುವಂತಹ ಅನಾಹುತಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಅಧಿಕಾರಿ ವರ್ಗದವರು ಸಿಬ್ಬಂದಿ ವರ್ಗದವರ ಮೇಲೆ ಒತ್ತಡವನ್ನು ಹೇರಬಾರದು ಎಂದು ಆಗ್ರಹಿಸಿದರು.

ಸರ್ಕಾರದ ಕಾಲಾವಧಿಯು ಇರುವುದರಿಂದ ನಿಧಾನವಾಗಿ ಕೆಲಸ ಮಾಡಿಕೊಂಡು ಹೋಗಲು ಅಧಿಕಾರಿಗಳು ಸಿಬ್ಬಂದಿ ವರ್ಗದವರಿಗೆ ಸೂಚನೆ ಕೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *