ಶಿವಮೊಗ್ಗ ನಗರದ ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದ ವತಿಯಿಂದ 11ನೇ ವರ್ಷದ ಗಣೇಶ್ೋತ್ಸವದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು ಬೃಹತ್ ರಕ್ತದಾನ ಶಿಬಿರದಲ್ಲಿ ಅತಿ ಹೆಚ್ಚು ಯುವಕ ಯುವತಿಯರು ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಗಣೇಶೋತ್ಸವದ ಸಡಗರವನ್ನು ಹೆಚ್ಚಿಸಿದರು.

ಈ ಸಂದರ್ಭದಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಕೆ ರಂಗನಾಥ್, ಗ್ಯಾರೆಂಟಿ ಪ್ರಾಧಿಕಾರದ ಸದಸ್ಯರಾದ ಎಸ್ ಬಸವರಾಜ್, ಶ್ರೀರಾಮ ಗೆಳೆಯರ ಬಳಗದ ಸೂರಜ್, ವಿಜಯ್, ಆದರ್ಶ್, ವೇಣುಗೋಪಾಲ್, ಚಿರಂಜೀವಿ ರಾಹುಲ್ , ಸಂಜಯ್, ಮನೋಜ ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *