ಮಂಜುನಾಥ ಶೆಟ್ಟಿ…
ಕನ್ನಡಿಗ ಯುವಕನ ಮೇಲೆ ವಲಸಿಗರಿಂದ ಹಲ್ಲೆ ಖಂಡನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ತಾರತಮ್ಯದ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಲಿ ಬೆಳಗಿನ ಜಾವ ಸರಿಸುಮಾರು 4:30 ರ ಸಮಯದಲ್ಲಿ ತಮ್ಮ ಪಾಡಿಗೆ ZEPTO ಡೆಲಿವರಿ ಕೆಲಸಕ್ಕೆ ತೆರಳುತ್ತಿದ್ದ ಬಡ ಕನ್ನಡಿಗ ಯುವಕನನ್ನು ತಡೆದು ನಿಲ್ಲಿಸಿ ಪಾನಮತ್ತರಾಗಿದ್ದ ಉತ್ತರ ಭಾರತದ ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರು ಸೇರಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.ಘಟನೆ ಅತ್ಯಂತ ಖಂಡನೀಯ ಮತ್ತು ಆತಂಕಕಾರಿ ಯುವಕನ ಮುಖ ಹಾಗೂ ದೇಹದ ಮೇಲೆ ಗಾಯಗಳಾಗಿದ್ದು ಹಲ್ಲೆಯಿಂದ ನೊಂದ ಆತ ರಾತ್ರಿ ಮನೆಗೆ ತೆರಳಿ ಬೆಳಗ್ಗೆ ಕರವೇ ಪ್ರವೀಣ್ ಶೆಟ್ಟಿ ಬಣದ ಮುಖಂಡರನ್ನು ಸಂಪರ್ಕಿಸಿ ತನ್ನ ಮೇಲೆ ನಡೆದ ಅನ್ಯಾಯವನ್ನು ವಿವರಿಸಿದ್ದಾನೆ.
ನೊಂದ ಯುವಕನಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಕರವೇ ಯುವ ಘಟಕದ ರಕ್ಷಿತ್ ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದ ಸಂದರ್ಭದಲ್ಲಿ ಹಲ್ಲೆಗೊಳಗಾದ ಯುವಕನನ್ನೇ ಪೊಲೀಸ್ ವಾಹನದಲ್ಲಿ ಕೂರಿಸುತ್ತಿರುವುದನ್ನು ಪ್ರಶ್ನೆ ಮಾಡಿ ಹಲ್ಲೆ ಮಾಡಿದವರು ಯಾರು ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗಳನ್ನು ಕೇಳಿದ ಕರವೇಯ ರಕ್ಷಿತ್ ಮೇಲೆಯೂ ಪೊಲೀಸ್ ಸಿಬ್ಬಂದಿಯೊಬ್ಬರು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಗಂಭೀರ ವಿಚಾರ ಎಂದರು.
ಸಾಮಾನ್ಯ ಕಾರ್ಮಿಕನ ಮೇಲೆ ಹಲ್ಲೆಯಾದಾಗ ಆತನಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಆರೋಪಿಗಳ ಬದಲಿಗೆ ಹಲ್ಲೆಗೊಳಗಾದವನನ್ನೇ ಒಳಗೆ ಹಾಕಿದ್ದಾರೆ.ಇದು ಅನ್ಯಾಯ ಅಲ್ಲವಾ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು ಕನ್ನಡಿಗನಾಗಲಿ ಬೇರೆ ರಾಜ್ಯದವನಾಗಲಿ ತಪ್ಪು ಮಾಡಿದವರು ಯಾರೇ ಆಗಿರಲಿ ಕಾನೂನಿನ ಪ್ರಕಾರ ಕ್ರಮವಾಗಬೇಕು.ಬಡ ಯುವಕ ತನ್ನ ಜೀವನೋಪಾಯಕ್ಕಾಗಿ ರಾತ್ರಿ ಸಮಯದಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದಾನೆ ಆತನ ಮೇಲೆ ಹಲ್ಲೆಯಾಗಿದ್ದರೆ ಆತನಿಗೆ ನ್ಯಾಯ ಕೊಡಿಸುವುದು ಪೊಲೀಸ್ ಇಲಾಖೆಯ ಕರ್ತವ್ಯವಲ್ಲವೇ ಈ ರೀತಿ ಪೊಲೀಸ್ ಸಿಬ್ಬಂದಿಯೇ ಕರವೇ ಪ್ರವೀಣ್ ಶೆಟ್ಟಿ ಬಣದ ಯುವಕನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ರವರು zepto ಸಿಬ್ಬಂದಿಗಳಿಗೆ ಧೈರ್ಯ ತುಂಬಿ ತದನಂತರ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಇದು ಅತ್ಯಂತ ಗಂಭೀರವಾದ ಪ್ರಕರಣ ಸತ್ಯಾಸತ್ಯತೆ ಹಾಗೂ ಪಾರದರ್ಶಕ ತನಿಖೆಯಿಂದ ಹೊರಬರಬೇಕು ಹಲ್ಲೆಗೊಳಗಾದ ಯುವಕನಿಗೆ ತಕ್ಷಣ ಸೂಕ್ತ ನ್ಯಾಯ ದೊರಕಿಸಬೇಕು ಘಟನೆಗೆ ಸಂಬಂಧಿಸಿದ CCTV ದೃಶ್ಯಗಳು ಮೊಬೈಲ್ ವಿಡಿಯೋಗಳು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಲ್ಲೆ ಮಾಡಿದವರು ಯಾರೇ ಆಗಿರಲಿ ತನಿಖೆಯಲ್ಲಿ ತಪ್ಪು ಸಾಬೀತಾದರೆ ಅವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಪೊಲೀಸ್ ಸಿಬ್ಬಂದಿಯ ಮೇಲೆ ಮಾಡಲಾಗಿರುವ ಹಲ್ಲೆ ಮತ್ತು ಅವಾಚ್ಯ ಶಬ್ದಗಳ ಆರೋಪದ ಬಗ್ಗೆಯೂ ಸ್ವತಂತ್ರ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು.ತನಿಖೆಯಲ್ಲಿ ಪೊಲೀಸ್ ಸಿಬ್ಬಂದಿ ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ಧವೂ ಇಲಾಖಾ ಹಾಗೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಕನ್ನಡಿಗನ ಮೇಲೆ ಅನ್ಯಾಯವಾದಾಗ ಪ್ರಶ್ನಿಸುವುದು ಅಪರಾಧವಲ್ಲ ನ್ಯಾಯಕ್ಕಾಗಿ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಈ ಘಟನೆಯ ಸಂಪೂರ್ಣ ಸತ್ಯವನ್ನು ಹೊರತಂದು ನೊಂದಿರುವ ಯುವಕನಿಗೆ ನ್ಯಾಯ ದೊರಕಿಸುವಂತೆ ಹಾಗೂ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರು ಆಗ್ರಹಿಸಿದ್ದರು.