ಮಂಜುನಾಥ ಶೆಟ್ಟಿ…

ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ 2026-27ನೇ ಸಾಲಿನಲ್ಲಿ ಸರ್ಕಾರಿ ಎ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಿಳ್ಳಂಗಿರಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು.

ಬಾಲಕರ ವಿಭಾಗದಲ್ಲಿ 100 ಮೀ. ಪ್ರಥಮ / ದ್ವಿತೀಯ, 200 ಮೀ. ಪ್ರಥಮ / ದ್ವಿತೀಯ, 400 ಮೀ. ಪ್ರಥಮ, 800 ಮೀ. ಪ್ರಥಮ, ನಡಿಗೆ ಪ್ರಥಮ, ಹರ್ಡಲ್ಸ್ ಪ್ರಥಮ/ದ್ವಿತೀಯ, ಶಾಟ್ ಯ, ಶಾಟ್ ಪುಟ್ ಪ್ರಥಮ / ದ್ವಿತೀಯ, ಉದ್ದಜಿಗಿತ ಪ್ರಥಮ / ದ್ವಿತೀಯ, ಎತ್ತರಜಿಗಿತ ಪ್ರಥಮ, 4+400 ರಿಲೆ- ದ್ವಿತೀಯ, ವಾಲಿಬಾಲ್ ಪ್ರಥಮ, ಬಾಲ್‌ ಬ್ಯಾಟ್‌ಮಿಟನ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ಥ್ರೌಬಾಲ್ ಪ್ರಥಮ, ಬಾಲ್‌ಬ್ಯಾಟ್ ಮಿಂಟನ್ ಪ್ರಥಮ, ಹರ್ಡಲ್ಸ್ ಪ್ರಥಮ, ನಡಿಗೆ ದ್ವಿತೀಯ/ತೃತೀಯ, 4+100, 4*400 ರಿಲೆ ತೃತೀಯ, 1500 ಮೀ. ತೃತೀಯ ಸ್ಥಾನ ಪಡೆದಿರುತ್ತಾರೆ.

ಬಾಲಕರ ವೈಯಕ್ತಿಕ ಚಾಂಪಿಯನ್ ಅನ್ನು ಕಾರ್ತಿಕ್ ಎಸ್ 9ನೇ ತರಗತಿ ವಿದ್ಯಾರ್ಥಿ ಪಡೆದಿರುತ್ತಾನೆ ಹಾಗೂ ಬಾಲಕರ ಸಮಗ್ರ ಚಾಂಪಿಯನ್‌ಶಿಪ್ ಮತ್ತು ಬಾಲಕ /ಬಾಲಕಿಯರ ಸಮಗ್ರ ಚಾಂಪಿಯನ್‌ಶಿಪ್ ಅನ್ನು ಪಿಳ್ಳಂಗಿರಿ ಶಾಲೆಯು ಪಡೆದಿರುತ್ತದೆ.

ಈ ಸಾಧನೆಗೆ ಕಾರಣರಾದ ದೈಹಿಕ ಶಿಕ್ಷಕ ರುದ್ರಪ್ಪ ಎಲ್.ಎನ್ ಮತ್ತು ಶ್ರೀಮತಿ ಬಿ ನಮಿತ ರವರಿಗೆ ಹಾಗೂ ವಿಜೇತ ಮಕ್ಕಳಿಗೆ, ಎಸ್.ಡಿ.ಎಂ.ಸಿ,ಅಧ್ಯಕ್ಷ ನಾಗರಾಜ, ಪ್ರಾಚಾರ್ಯ ಹೇಮಕೇಶವ , ಉಪ ಪ್ರಾಂಶುಪಾಲ ಶ್ರೀನಿವಾಸ ತಡಕನಹಳ್ಳಿ, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಪ್ಪ , ಗ್ರಾಮ ಪಂಚಾಯತಿಯ ಎಲ್ಲಾ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು, ಪೋಷಕರು ಮತ್ತು ಗ್ರಾಮಸ್ಥರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *