ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದ ಮೀನಾಕ್ಷಿ ಭವನ ಸುತ್ತಲಿನ ಪ್ರದೇಶದಲ್ಲಿ COTPA ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ದಾಳಿಗಳನ್ನು ಹಮ್ಮಿಕೊಳ್ಳಲಾಯಿತು. ಒಟ್ಟು 14 ಪ್ರಕರಣಗಳನ್ನು ದಾಖಲಿಸಿ 2700 ದಂಡವನ್ನು ಸಂಗ್ರಹಿಸಲಾಯಿತು.

ತಂಡದಲ್ಲಿ ತಂಡದ ನೇತೃತ್ವವನ್ನು ಡಾ. ಚಂದ್ರಶೇಖರ್ ತಾಲ್ಲೂಕು ಆರೋಗ್ಯ ಅಧಿಕಾರಿಗಳು ವಹಿಸಿದ್ದರು. ಶ್ರೀ ಹೇಮಂತ್ ರಾಜ್ ಅರಸ್ ಜಿಲ್ಲಾ ಸಲಹೆಗಾರರು, ಶ್ರೀ ರವಿರಾಜ್ ಸಮಾಜ ಕಾರ್ಯಕರ್ತರು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಆರೋಗ್ಯ ಇಲಾಖೆ ಇವರು ಭಾಗವಹಿಸಿದ್ದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು. ದಾಳಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ಸೇವನೆ ಉಂಟಾಗುವ ದುಷ್ಪರಿಣಾಮಗಳು ಹಾಗೂ COTPA ಕಾಯ್ದೆ ಕುರಿತು ಅರಿವು ಮೂಡಿಸಲಾಯಿತು.

Leave a Reply

Your email address will not be published. Required fields are marked *