ಮಂಜುನಾಥ್ ಶೆಟ್ಟಿ…
ಶ್ರೀ ಬಿ. ಕೆ. ಸಂಗಮೇಶ್ವರ ಶಾಸಕರು, ಭದ್ರಾವತಿ ವಿಧಾನ ಸಭಾ ಕ್ಷೇತ್ರ ರವರು ಹಾಗೂ ಯೂನಿಯನ್ ಬ್ಯಾಂಕ್ ಸೋಷಿಯಲ್ ಫೌಂಡೇಶನ್ ವತಿಯಿಂದ ಭದ್ರಾವತಿ ಉಪ ವಿಭಾಗಕ್ಕೆ ಒಟ್ಟು 04 ವಾಹನಗಳನ್ನು ನೀಡಿದರು.
ಸದರಿ ವಾಹನಗಳ ಅಧಿಕೃತ ಹಸ್ತಾಂತರ ಸಮಾರಂಭವನ್ನು ಹಮ್ಮಿಕೊಂಡಿದ್ದು ಪೊಲೀಸ್ ಇಲಾಖೆಗೆ 04 ವಾಹನಗಳನ್ನು ಹಸ್ತಾಂತರಿಸಿರುತ್ತಾರೆ. ವಾಹನಗಳನ್ನು ನೀಡಿದ ಸನ್ಮಾನ್ಯರಿಗೆ ಹಾಗೂ ಯೂನಿಯನ್ ಬ್ಯಾಂಕ್ ಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಮತ್ತು ತಂಡದವರು ಧನ್ಯವಾದಗಳನ್ನು ತಿಳಿಸಿದರು.