ಮಂಜುನಾಥ್ ಶೆಟ್ಟಿ…

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸಿರುವ ಪ್ರತಿಷ್ಠಿತ ವಿಜಯ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿರುವ ಆಟಗಾರರ ಪಟ್ಟಿಯಲ್ಲಿ ಶಿವಮೊಗ್ಗದ ಪ್ರತಿಭಾವಂತ ಯುವ ಕ್ರಿಕೆಟಿಗ ಆಯುಷ್ ವೈ.ಎಸ್. ಸ್ಥಾನ ಪಡೆ ದಿದ್ದು, ಜಿಯ ಕ್ರೀಡಾಭಿ ಮಾನಿ ಗಳಲ್ಲಿ ಭಾರೀ ಸಂತಸ ಮೂಡಿಸಿದೆ.

16 ವರ್ಷದೊಳಗಿನ ಈ ಪಂದ್ಯಾವಳಿಯು ನ. 14 ರಿಂದ ಡಿ. 6ರವರೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುತ್ತಿದೆ. ಈ ಪಂದ್ಯಾವಳಿಗೆ ಕೆಎಸ್‌ಸಿಎ ಶಿವಮೊಗ್ಗ ವಲಯದಿಂದ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಆಯುಷ್ ಅವರ ಈ ಸಾಧನೆ ಕೆಎಸ್‌ಸಿಎ ಶಿವಮೊಗ್ಗ ವಲಯಕ್ಕೆ ಹೆಮ್ಮೆ ಮೂಡಿಸಿದೆ.

ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಆಯುಷ್, ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ನಿರಂತರ ಅಭ್ಯಾಸದ ಮೂಲಕ ರಾಜ್ಯಮಟ್ಟದ ಕ್ರಿಕೆಟ್‌ನಲ್ಲಿ ಗುರುತಿಸಿಕೊಳ್ಳುವತ್ತ ಮಹತ್ವದ ಹೆಜ್ಜೆ ಇರಿಸಿದ್ದಾರೆ. ಸದ್ಯ ಶಿವಮೊಗ್ಗದ ಡೈಮಂಡ್ ಕ್ರಿಕೆಟ್ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ನಗರದ ಪ್ರತಿಷ್ಠಿತ ವಿಕಾಸ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿzನೆ.

2024ರ ಜನವರಿಯಲ್ಲಿ ಬಿಸಿಸಿಐ 14 ವರ್ಷ ವಯೋಮಿತಿಯ ಆಟಗಾರರಿಗಾಗಿ ಪುದುಚೇರಿಯಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಕ್ರಿಕೆಟ್ ಪಂದ್ಯಾವಳಿಗೂ ಆಯುಷ್ ಆಯ್ಕೆಯಾಗಿ ಆಡಿದ್ದನು. ಇದೀಗ ದೇಶದ ಪ್ರತಿಷ್ಠಿತ ವಯೋಮಿತಿಯ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ವಿಜಯ್ ಮರ್ಚೆಂಟ್ ಟ್ರೋಫಿಗೂ ಆಯ್ಕೆಯಾಗಿರುವುದು ಅವರ ಕ್ರಿಕೆಟ್ ಪಯಣಕ್ಕೆ ಮತ್ತೊಂದು ಮಹತ್ವದ ಮೈಲಿಗಗಿದೆ.

ಶಿವಮೊಗ್ಗದ ಪ್ರತಿಷ್ಠಿತ ‘ಎಚ್ಚರಿಕೆ’ ಪತ್ರಿಕೆಯ ಸಂಪಾದಕ ವೈ.ಕೆ. ಸೂರ್ಯನಾರಾಯಣ ಹಾಗೂ ಶಿಕ್ಷಕಿ ಶ್ರೀಮತಿ ವತ್ಸಲಾ ದಂಪತಿಯ ಕಿರಿಯ ಪುತ್ರನಾದ ಆಯುಷ್ ಅವರ ಸಾಧನೆಗೆ ಕುಟುಂಬದವರು, ಕ್ರೀಡಾಭಿಮಾನಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿzರೆ. ವಿಶೇಷವಾಗಿ ಕೆಎಸ್ ಸಿಎ ಶಿವಮೊಗ್ಗ ವಲಯ ಸಂಚಾಲಕರೂ ಆದ ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್, ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎ.ಜೆ. ರಾಮಚಂದ್ರ, ಮುಖ್ಯೋಪಾಧ್ಯಾಯ ಗೋಪಾಲ ಕೃಷ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ನೆಹರು ಸ್ಟೇಡಿಯಂ ಗೆಳೆಯರ ಬಳಗ, ಡೈಮಂಡ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ರಾಜೇಂದ್ರ ಕಾಮತ್, ಕಾರ್‍ಯದರ್ಶಿ ಸುಕುಮಾರ್ ಪಟೇಲ್ ಹಾಗೂ ಕ್ರಿಕೆಟ್ ಕ್ಲಬ್‌ನ ಎಲ್ಲ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಹಾಗೆಯೇ ಹಿರಿಯ ಪತ್ರಕರ್ತ ರಾದ ಎಸ್.ಚಂದ್ರಕಾಂತ್, ಎನ್.ಮಂಜುನಾಥ್, ಶೃಂಗೇಶ್, ವೈದ್ಯನಾಥ್, ನಾಗರಾಜ್ ನೆರಿಗೆ, ಎನ್. ರವಿಕುಮಾರ್, ಕೆ.ವಿ. ಶಿವಕುಮಾರ್, ಗೋಪಾಲ್ ಎಸ್. ಯಡಿಗೇರಿ, ಅವರು ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಶಿವಮೊಗ್ಗದ ಯುವ ಪ್ರತಿಭೆಯೊಬ್ಬ ಬಿಸಿಸಿಐ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವುದು ಜಿಯ ಕ್ರಿಕೆಟ್ ವಲಯಕ್ಕೆ ಹೆಮ್ಮೆಯ ಸಂಗತಿ ಯಾಗಿದ್ದು, ವಿಜಯ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕ ತಂಡ ವನ್ನು ಪ್ರತಿನಿಧಿಸುತ್ತಿರುವ ಆಯುಷ್ ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನಾವರಣಗೊಳಿಸಲಿ ಎಂಬುದು ಕ್ರೀಡಾಭಿಮಾನಿಗಳ ಆಶಯ.

Leave a Reply

Your email address will not be published. Required fields are marked *