ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್ಕಿಟೆಕ್ಟ್ ದಿನೇಶ್ ಶರ್ಮಾ IIID ವತಿಯಿಂದ ಡಿಸೆಂಬರ್ ಹದಿನೈದು ರಿಂದ ಇಪ್ಪತ್ತು ರವರೆಗೆ 5 ದಿನಗಳ ಕಾಲ ಬೃಹತ್ ವಿನ್ಯಾಸದ ಉತ್ಸವ ನಡೆಯಲಿದೆ.

ಈ ಉತ್ಸವದಲ್ಲಿ ಸ್ಥಳೀಯರಿಗೆ ಅವಕಾಶ ಮತ್ತು ಕುಶಲ ಕರ್ಮಿಗಳನ್ನು ಉಳಿಸಿ ಎಂಬ ವಿಷಯವನ್ನು ಪ್ರತಿಪಾದಿಸಲಾಗುತ್ತದೆ. ಇನ್ ಸ್ಟಿಟ್ಯೂಟ್ ಆಫ್ ಇಂಡಿಯನ್ ಇಂಟೀರಿಯರ್ ಡಿಸೈನರ್ಸ್ ಆರ್ಕಿಟೆಕ್ಟ್ ವಿನ್ಯಾಸಗಳು ಉತ್ತೇಜನದ ಮೇಲೆ ಗಮನ ಲಾಭೋದ್ದೇಶವಿಲ್ಲದ ಸಂಸ್ಥೆ ಯಾಗಿದ್ದು ಈ ಉತ್ಸವವನ್ನು ಆಯೋಜಿಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಐಐಟಿ ಬಿಆರ್ ಸಿ ಅಧ್ಯಕ್ಷೆ ಆರ್ಕಿಟೆಕ್ಟ್ ಕವಿತಾಶಾಸ್ತ್ರಿ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಮೇಕ್ ಇಂಡಿಯಾ ಅಭಿಯಾನದ ಉತ್ತೇಜಿಸಲು ಮತ್ತು ರಾಜ್ಯಾದ್ಯಂತ ಸ್ಥಳೀಯ ಕುಶಲಕರ್ಮಿಗಳು ನೆರವಾಗಲು ಮತ್ತು ಪ್ರೋತ್ಸಾಹ ನೀಡಲು ಈ ಉತ್ಸವವನ್ನು ಆಯೋಜಿಸುತ್ತಿದೆ ಎಂದು ಹೇಳಿದರು.

ವರದಿ: ಮಂಜುಳಾ ರೆಡ್ಡಿ ಬೆಂಗಳೂರು…