ಶಿವಮೊಗ್ಗ: ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನಾ ಸಮಾರಂಭವನ್ನ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದ ಉದ್ಘಾಟನೆಯನ್ನು ನಿಕಟಪೂರ್ವ ಸಂಯೋಜನಾಧಿಕಾರಿ ಹಾಗೂ  ಎನ್ಎಸ್ಎಸ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ  ಡಾ. ಕುಂದನ್ ಬಸವರಾಜ್ ನೆರವೆರಿಸಿದರು.

ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಎನ್ಎಸ್ಎಸ್  ಧ್ಯೇಯ ವಾಕ್ಯ ನಿಸ್ವಾರ್ಥವಾದ ಸೇವೆಗೆ ತಕ್ಕ ಪ್ರತಿಫಲ ಸಿಗುತ್ತದೆ. ಇಂದಿನ ವಿದ್ಯಾರ್ಥಿಗಳಲ್ಲಿ ಆತ್ಮಭಿಮಾನ ಹೆಚ್ಚಾಗಬೇಕಿದೆ. ಉಸಿರು ತೆಗೆದುಕೊಂಡು ಉಸಿರು ಬಿಡುವ ಒಳಗೆ ಹೆಸರು ಮಾಡಬೇಕು. ಸಮಾಜದ ಸೇವೆಯೊಂದಿಗೆ ವ್ಯಕ್ತಿ ವಿಕಾಸ ಸಾಧ್ಯ ಎಂದರು.ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್ಎಸ್ಎಸ್ ಅಧಿಕಾರಿ ಡಾ. ಹಾಲಮ್ಮ ಎಂ ಅವರು, ಸಮುದಾಯಮುಖಿಯಾಗಬೇಕು ಎಂದರು.

ಕುವೆಂಪು ವಿಶ್ವವಿದ್ಯಾಲಯ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಮಾತನಾಡಿ, ನಮ್ಮನ್ನು ನಾವು ಸೇವೆಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಬಿ. ಧನಂಜಯ್ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ  ಕಲಾ ತಂಡದ ಡಾ. ನಿಂಗರಾಜ್ ಆರ್ ಮತ್ತು ಡಾ. ಮಧುಸೂದನ್ ಮೈಸೂರು ಇವರು ಜನಪದ ವೈಭವ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಮುದಕಪ್ಪ ಸ್ವಾಗತಿಸಿ, ನಾಗಶ್ರೀ ಕನ್ನಂಗಿ ವರದಿ ವಾಚಿಸಿದರು. ಗುರುರಾಜ್ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…