Day: September 24, 2025

ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಜನಾಕ್ರೋಶ ಪ್ರತಿಭಟನೆ ರಸ್ತೆ ತಡೆ…

ಜಾತಿ ಗಣತಿಯ ಹೆಸರಿನಲ್ಲಿ ಹಿಂದೂ ಧರ್ಮವನ್ನು ಒಡೆಯಲು ಹೊರಟಿರುವ ಕಾಂಗ್ರೆಸ್ ಸರ್ಕಾರದಿಂದ ಬೀದಿ ಬೀದಿಯಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ನಗರದ ಖಾಸಗಿ ಬಸ್ ನಿಲ್ದಾಣದ ಎದುರಿನ ಅಶೋಕ ವೃತ್ತದಲ್ಲಿ ಬಿಜೆಪಿ ಶಿವಮೊಗ್ಗ…

ವಾಸವಿ ಮಹಿಳಾ ಸಂಘ ಸುವರ್ಣ ಮಹೋತ್ಸವ ಅಂಗವಾಗಿ ವಿಶೇಷ ಕಾರ್ಯಕ್ರಮ…

ವಾಸವಿ ಮಹಿಳಾ ಸಂಘ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ದಸರಾ ಹಬ್ಬದ ಪ್ರಯುಕ್ತ ವಾಸವಿ ಮಹಿಳಾ ಸಂಘದಿಂದ 251 ಸೀರೆಗಳನ್ನು ಮಹಿಳೆಯರಿಗೆ ಗಾಂಧಿ ಬಜಾರ್ ಕನ್ಯಕಾಪರಮೇಶ್ವರಿ ದೇವಸ್ಥಾನದ ಮುಂದೆ ದಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಾಸವಿ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ…

ಒಟಿಟಿ ‌ಸಮಿತಿಗೆ ದೇಶಾದ್ರಿ ನೇಮಕ…

ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕಾಗಿ ಒಟಿಟಿ ವೇದಿಕೆಯನ್ನು ಸೃಜಿಸಲು ಪೂರಕವಾಗಿ ಅಗತ್ಯ ಮಾಹಿತಿಯನ್ನು ಪಡೆದು ಯೋಜನೆಯ ರೂಪುರೇಷೆಗಳನ್ನು ರಚಿಸಲು ಅನುವಾಗುವಂತೆ ರಾಜ್ಯ ಸರ್ಕಾರವು ತಜ್ಞರ ಸಮಿತಿಯೊಂದನ್ನು ರಚಿಸಿದ್ದು,ಅದರ ಸದಸ್ಯರಾಗಿ ಪತ್ರಕರ್ತ ದೇಶಾದ್ರಿ ಹೊಸ್ಮನೆ ಅವರನ್ನು ನೇಮಕ‌ ಮಾಡಲಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ…

ಎಲೆಚುಕ್ಕಿ, ಅಡಿಕೆ ಕೊಳೆ ರೋಗ ರೈತರ ಬದುಕನ್ನು ಕಸಿಯುತ್ತಿದೆ: ಶಾಸಕ ಗೋಪಾಲಕೃಷ್ಣ ಬೇಳೂರು…

ಎಲೆಚುಕ್ಕಿ ರೋಗ ಹಾಗೂ ಅಡಿಕೆ ಕೊಳೆ ರೋಗವು ಮಲೆನಾಡಿನ ರೈತರ ಜೀವನದ ಆರ್ಥಿಕತೆಯನ್ನು ಕಸಿಯುತ್ತಿದ್ದು, ಕೃಷಿ ವಿಜ್ಞಾನಿಗಳು ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಗುಣಪಡಿಸುವ ಕಾರ್ಯ ಮಾಡಬೇಕು ಎಂದು ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಅವರು ಇರುವಕ್ಕಿಯ ಕೆಳದಿ…

ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಪ್ರಾಣಿಗಳ ವಿನಿಮಯ ಕಾರ್ಯಕ್ರಮ…

ದೆಹಲಿಯ ಕೇಂದ್ರೀಯ ಮೃಗಾಲಯ ಪ್ರಾಧಿಕಾರದವರಿಂದ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮ, ಸಿದ್ದಾರ್ಥ ಗಾರ್ಡನ್ ಮತ್ತು ಝೂ ಮುನ್ಸಿಪಲ್ ಕಾರ್ಪೋರೇಷನ್, ಔರಂಗಾಬಾದ್- ಮಹಾರಾಷ್ಟç ಮತ್ತು ಕಮಲಾ ನೆಹರು ಪ್ರಾಣಿ ಸಂಗ್ರಹಾಲಯ ಮುನ್ಸಿಪಲ್ ಕಾರ್ಪೋರೇಷನ್, ಇಂದೋರ್ ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ಕಾರ್ಯಕ್ರಮಕ್ಕೆ ಅನುಮೋದನೆ ಸಿಕ್ಕಿದ್ದು…

ಸಂದೇಶ ನೀಡುವ ರಚನಾತ್ಮಕ ಚಲನಚಿತ್ರಗಳು ಮೂಡಿಬರಲಿ : ಸಚಿವ ಮಧು ಬಂಗಾರಪ್ಪ…

ರಾಜಕಾರಣದಲ್ಲಿ ಯಾರಿಗೂ ತಿಳಿಯದಂತೆ ಜಾತಿ, ಧರ್ಮದ ಸೋಂಕು ತಗುಲಿದೆ. ಇಂತಹ ಕಳಂಕಗಳಿಗೆ ಚಿತ್ರರಂಗ ಹೊರಬಂದು ಮನೋರಂಜನೆಯ ಜೊತೆಗೆ ಸಾಮಾಜಿಕ ಹಿತದ ಸಂದೇಶ ನೀಡುವ ರಚನಾತ್ಮಕ ಚಿತ್ರಗಳು ನಿರ್ಮಾಣಗೊಳ್ಳಬೇಕು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ…