Day: September 17, 2025

DJ ವಿರುದ್ಧ 55 ಪ್ರಕರಣ ದಾಖಲು-ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್…

ಶಿವಮೊಗ್ಗ ಜಿಲ್ಲೆಯಾದ್ಯಂತ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮತ್ತು ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ, ನಿಗದಿತ ಶಬ್ದದ ಮಿತಿಯ ನಿಯಮವನ್ನು ಉಲ್ಲಂಘಿಸಿ ಶಬ್ದ ಮಾಲಿನ್ಯವನ್ನುಂಟು ಮಾಡಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ಸೌಂಡ್ ಬಾಕ್ಸ್ (ಡಿ.ಜೆ) ಗಳನ್ನು ಬಳಕೆ ಮಾಡಿದವರ ವಿರುದ್ಧ ವಿವಿಧ…

ಮಹಿಳಾ ದಸರಾ ಅಂಗವಾಗಿ ನಾರಿ ಶಕ್ತಿ ಮಹಾ ಶಕ್ತಿ ಜಾಥಾ…

ಮಹಿಳಾ ದಸರಾ ಅಂಗವಾಗಿ ನಾರಿ ಶಕ್ತಿ ಮಹಾ ಶಕ್ತಿ ಜಾಥಾವನ್ನು ಮಾನ್ಯ ಶಾಸಕರಾದ ಶ್ರೀ ಚನ್ನಬಸಪ್ಪ ಮತ್ತು ವಿಧಾನ ಪರಿಷತ್ MLC ರವರಾದ ಶ್ರೀಮತಿ ಬಲ್ಕಿಷ್ ಬಾನು ರವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ 300 ಕ್ಕೂ ಹೆಚ್ಚು…

ಪ್ರಧಾನಿ ಮೋದಿ 75 ನೇ ಜನ್ಮ ದಿನಾಚರಣೆವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ 68ನೇ ಬಾರಿ ರಕ್ತದಾನ…

ದೇಶದಾದ್ಯಂತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75 ನೇ ಜನ್ಮ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ, ಇಂದು ಭದ್ರಾವತಿಯ ಬಿಜೆಪಿ ಕಾರ್ಯಾಲಯದಲ್ಲಿ ಭದ್ರಾವತಿ ನಗರ ಮಂಡಲ ಯುವಮೋರ್ಚಾ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ…

ಅಪಘಾತ ತಪ್ಪಿಸಿದ ವೈಜ್ಞಾನಿಕ ರಸ್ತೆ ಹಂಪ್ಸ್ ನಿರ್ಮಾಣ-ಸವಾರರ ಹಾಗೂ ಸಂಚಾರಿ ಪೊಲೀಸರ ಮೆಚ್ಚುಗೆ…

ಶಿವಮೊಗ್ಗ ನಗರದಲ್ಲಿ ಮೂರು ಕಡೆ ನಿರ್ಮಿಸಿರುವ ರಸ್ತೆ ಹಂಪ್ಸ್ ಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಾಹನ ಚಲಾವಣೆಗೆ ಯಾವುದೇ ತೊಂದರೆಯಾಗುವುದಿಲ್ಲ ಹಾಗೂ ವೇಗ ಮಿತಿ ಹಿಡಿತದಲ್ಲಿರುತ್ತದೆ ಮತ್ತು ಅಪಘಾತಗಳ ಸಂಖ್ಯೆ ಇದರಿಂದ ಕ್ಷೀಣಿಸುತ್ತದೆ ಎಂದು ಪ್ರಶಂಸಿಸಿದ್ದಾರೆ. ಶಿವಮೊಗ್ಗ ನಗರದ ಗಾರ್ಡನ್ ಏರಿಯಾಗೆ…

ಜಿಎಸ್‌ಟಿ 2.0 ಸುಧಾರಣೆಯಿಂದ ಎಲ್ಲ ವರ್ಗದವರಿಗೂ ಅನುಕೂಲ-B. ಗೋಪಿನಾಥ್…

ಶಿವಮೊಗ್ಗ: ಜಿಎಸ್‌ಟಿಯಲ್ಲಿ ಎರಡನೇ ಹಂತದ ಸುಧಾರಣೆಗಳಿಂದ ಎಂಎಸ್‌ಎಂಇ, ಸಣ್ಣ ಕೈಗಾರಿಕಾ ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಜನಸಾಮಾನ್ಯರಿಗೆ ಆರ್ಥಿಕ ಪ್ರಯೋಜನ ದೊರೆಯುವ ನಿರೀಕ್ಷೆ ಇದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ…

SUDA ಅಧ್ಯಕ್ಷರಾದ HS.ಸುಂದರೇಶ್ ಭರ್ಜರಿ ಹುಟ್ಟು ಹಬ್ಬದ ಸಂಭ್ರಮ…

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರ ಹುಟ್ಟುಹಬ್ಬವನ್ನು ಅವರ ಗೆಳೆಯಬಳಗ ಸಂಭ್ರಮ-ಸಡಗರದಿಂದ ಮೆರವಣಿಗೆಯಲ್ಲಿ ಕರೆತಂದು ಸೂಡಾ ಕಛೇರಿ ಮುಂಭಾಗದಲ್ಲಿ ಹಾಕಿದ್ದ ವೇದಿಕೆಯಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿ ಜೈಕಾರ ಹಾಕಿ ಸಂಭ್ರಮಿಸಿದರು. ಇದಕ್ಕೂ ಮೊದಲು ಸುಂದರೇಶ್ ಅವರು ದ್ರೌಪದಮ್ಮ…

ಮೋದಿ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ ಯುವ ಕಾಂಗ್ರೆಸ್…

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಬೋಂಡಾ ಸೂಪ್ ತರಕಾರಿ ಚಹಾ ಮಾರುವ ಮೂಲಕ ವಿನೂತನವಾಗಿ ಆಚರಣೆ. ಶಿವಮೊಗ್ಗ ನಗರದ ಖಾಸಗಿ ಬಸ್ ಸ್ಟಾಂಡ್ ಮುಂಭಾಗದಲ್ಲಿ…

ಜೋಗ: ಮೆಸ್ಕಾಂ ಜನ ಸಂಪರ್ಕ ಸಭೆ…

ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲಿ ಸೆ. 19 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬAಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ…

ಮಾಜಿ ಸೈನಿಕರಿಗೆ ಎಚ್‌ಎಎಲ್ (HAL) ನಿಂದ ಅರ್ಜಿ ಆಹ್ವಾನ…

ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್‌ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್/ ಎಲೆಕ್ನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ, 45 ವರ್ಷದೊಳಗಿನ ಸಾಮಾನ್ಯ ವರ್ಗದ ಹಾಗೂ 50 ವರ್ಷದೊಳಗಿನ ಎಸ್ಸಿ/ಎಸ್‌ಟಿ ವರ್ಗದ ಮಾಜಿ ಸೈನಿಕರುಗಳಿಗೆ ನಾಲ್ಕು ವರ್ಷಗಳ ಅವಧಿಗೆ ಏರ್‌ಪ್ರೇಮ್ / ಎಲೆಕ್ಟ್ರೀಷಿಯನ್ ಹುದ್ದೆಗೆ…

5-16 ವರ್ಷದ ಮಕ್ಕಳಿಗೆ ಚಿತ್ರಕಲೆ ಮತ್ತು ದೇಶಭಕ್ತಿಗೀತೆ ಸ್ಪರ್ಧೆ…

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2025-26ನೇ ಸಾಲಿನ 79ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ 5-16 ವರ್ಷದೊಳಗಿನ ಮಕ್ಕಳಿಗೆ ಜಿಲ್ಲಾ ಬಾಲಭವನ ಸಮಿತಿಯಿಂದ ಸೆ.19 ರಂದು ಚಿತ್ರಕಲೆ ಮತ್ತು ದೇಶಭಕ್ತಿಗೀತೆ ಸ್ಪರ್ಧೆಯನ್ನು ಆಯೋಜಿಸಿದೆ. ಚಿತ್ರಕಲೆ ಸ್ಪರ್ಧೆಯಲ್ಲಿ 75 ಮಕ್ಕಳಿಗೆ 3…