ಗೋಣಿಬೀಡು ಮತ್ತು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಕೋವಿಡ 19 ಸಾಂಕ್ರಾಮಿಕ ರೋಗವು ದಿನನಿತ್ಯ ಹೆಚ್ಚುತ್ತಿರುವುದರಿಂದ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ತೀರ್ಮಾನದಂತೆ ದಿನಾಂಕ 09/06/2021 ರಿಂದ 14/06/2021 ರ ವರೆಗೆ ಇಡೀ 2 ಗ್ರಾಮಗಳನ್ನು ಸೀಲ್ ಡೌನ್ ಒಳಪಡಿಸಿದೆ . ಈ ಸದರಿ ಅವಧಿಯಲ್ಲಿ ಈ ಕೆಳಕಂಡಂತೆ ನಿಯಮ ಪಾಲಿಸಲು ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಸೂಚಿಸಿದೆ .ತಪ್ಪಿದ್ದಲ್ಲಿ ದಂಡ ವಿಧಿಸಲಾಗುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು.

  1. ದಿನಸಿ ಅಂಗಡಿ ಮತ್ತು ಚಿಕನ್ ಅಂಗಡಿಗಳಿಗೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದೆ ನಂತರದ ಅವಧಿಯಲ್ಲಿ ವ್ಯಾಪಾರ ಮಾಡಿದ್ದು ಕಂಡುಬಂದಲ್ಲಿ 500ರೂ ದಂಡ ವಿಧಿಸಲಾಗುವುದು
  1. ಹೋಟೆಲ್ ಅನ್ನು ಇಂದಿನಿಂದ 14/06/2021 ರ ವರಗೆ ತೆರೆಯುವಂತಿಲ್ಲ.ಮೀರಿ ಹೋಟೆಲ್ ತೆರೆದರೆ 500 ರೂ ಗಳನ್ನು ಮಾಲೀಕರಿಗೆ ದಂಡ ವಿಧಿಸಲಾಗುವುದು .
  2. ಮಾಸ್ಕ್ ಹಾಕದೆ ಓಡಾಡಿದಲ್ಲಿ 100 ರೂ ದಂಡ ವಿಧಿಸಲಾಗುವುದು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153