ಸ್ವಚ್ಛ ಭಾರತದ ಕಲ್ಪನೆಯ ವಿರುದ್ಧ ದೃಶ್ಯ ರಾಷ್ಟ್ರೀಯ ಹೆದ್ದಾರಿ ಬಳಿ ಕಾಣುತ್ತಿದೆ.ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗರ ನಗರದಿಂದ ಕೆಲವೇ ಅಂಚಿನ ದೂರದಲ್ಲಿರುವ ಸಣ್ಣ ಮನೆ ಸೇತುವೆಯ ಬಳಿ ತ್ಯಾಜ್ಯದ ರಾಶಿ ಕಂಡು ಬಂದಿದೆ ಕಸ, ಕಡ್ಡಿ ,ಪ್ಲಾಸ್ಟಿಕ್, ಬಾಟಲಿ ,ಬಟ್ಟೆ ಇತ್ಯಾದಿ ಈ ಸ್ಥಳದಲ್ಲಿ ಸುರಿಯಲಾಗುತ್ತಿದೆ.
ನಗರ ಪ್ರವೇಶಿಸುತ್ತಿದ್ದಂತೆ ಈ ರೀತಿ ಕಸ ಸುರಿದಿರುವುದರಿಂದ ಅಲ್ಲಿನ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆಯಲ್ಲಿ ಈ ಸ್ಥಳಕ್ಕೆ ಕಸ ತಂದು ಸುರಿದು ಹೋಗುತ್ತಿದ್ದಾರೆ. ಅಂಥವರನ್ನು ಪತ್ತೆ ಮಾಡಿ ನಗರಸಭೆ ಅಧಿಕಾರಿಗಳು ದಂಡ ವಿಧಿಸಬೇಕು’ ಎಂದು ಸ್ಥಳೀಯರಾದ ವಿನೋಬ ನಗರ ನಿವಾಸಿ ವರುಣ್ ಸಾಗರ್ ಆಗ್ರಹಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ 31ವಾರ್ಡ್ ಗಳಿವೆ ಪ್ರತಿ ವಾರ್ಡ್ ಗಳಿಗೂ ನಗರಸಭೆ ವಾಹನಗಳು ಮನೆ ಬಾಗಿಲಿಗೆ ಬರುತ್ತದೆ ವಾಹನಕ್ಕೆ ಕಸ ಹಾಕುವ ಬದಲು ರಸ್ತೆ ಬದಿಯಲ್ಲಿ, ಖಾಲಿ ಸೈಟುಗಳಲ್ಲಿ,ಸಣ್ಣಮನೆ ಸೇತುವೆಯ ಮೇಲ್ಭಾಗದಿಂದ ಕಸ ಎಸೆಯುತ್ತಿದ್ದಾರೆ ಕಸ ಕೊಳೆತು ದುರ್ನಾತ ಬೀರುತ್ತದೆ ಅಲ್ಲದೆ ಸಾಂಕ್ರಾಮಿಕ ರೋಗವು ಹರಡುತ್ತದೆ.ಇದು ಹೀಗೆಯೇ ಮುಂದುವರಿದರೆ ಪಟ್ಟಣ ಸೌಂದರ್ಯವು ಹಾಳಾಗುವುದರಲ್ಲಿ ಅನುಮಾನವೇ ಇಲ್ಲವೆಂದು ಸ್ಥಳೀಯರಾದ ದೇವರಾಜ್ ರವರು ಅಭಿಪ್ರಾಯಪಟ್ಟರು.
ಸಿಸಿ ಕ್ಯಾಮೆರಾ ಅಳವಡಿಸಲು ಆಗ್ರಹ…
ಸಾಗರ ನಗರದ ಹಲವೆಡೆ ಕಸಗಳನ್ನು ಸುರಿಯಲಾಗುತ್ತಿದೆ ಅಂಥವರನ್ನು ಪತ್ತೆ ಹಚ್ಚಲು ಸ್ಥಳೀಯ ಆಡಳಿತ, ಶಾಸಕರು ಸಿಸಿ ಕ್ಯಾಮೆರಾ ಅಳವಡಿಸಬೇಕು.ಯಾರು ಕಸ ತಂದು ಹಾಕುತ್ತಾರೆ ಎಂದು ಇದರಲ್ಲಿ ಗಮನಿಸಬಹುದಾಗಿದೆ ಅಂಥವರ ವಿರುದ್ಧ ದಂಡ ಹಾಕಬಹುದು ಹಾಗೂ ಮುಂದಿನ ದಿನಗಳಲ್ಲಿ ಕಸ ಹಾಕುವವರು ಎಚ್ಚರಿಕೆಯಿಂದ ಇರುತ್ತಾರೆ ಎಂದು ಬ್ಯಾಂಕ್ ನೌಕರ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.