ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಕುಂಸಿಯಲ್ಲಿ ಇಂದು 40 ಲಕ್ಷ ವೆಚ್ಚದ ಶ್ರೀ ನಿಂಬುಜ ದೇವಿ ಸಮುದಾಯ ಭವನ 30 ಲಕ್ಷ ವೆಚ್ಚದ ಶ್ರೀ ವೀರಭದ್ರೇಶ್ವರ ಸಮುದಾಯ ಭವನ 40 ಲಕ್ಷ ವೆಚ್ಚದ ಶ್ರೀ ವೆಂಕಟೇಶ್ವರ ಸ್ವಾಮಿ ಸಮುದಾಯ ಉದ್ಘಾಟನೆಯನ್ನು ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಮತ್ತು ಗ್ರಾಮಾಂತರ ಶಾಸಕರಾದ ಅಶೋಕ ನಾಯ್ಕ್ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ರುದ್ರೇ ಗೌಡ್ರು, ಜಿ.ಪಂ ನಿಕಟ ಪೂರ್ವ ಸದಸ್ಯರಾದ ನಾಗರಾಜ್, ಮುಖಂಡರುಗಳಾದ ಲಕ್ಷೀಕಾಂತ್ ಶೆಟ್ರು, ಷಣ್ಮುಖಪ್ಪ, ಅರುಣ್, ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ ಶಾರದ ರಂಗನಾಥ್, ಹಾಗೂ ಪ್ರಮುಖರು, ಕಾರ್ಯಕರ್ತರುಗಳು, ಗ್ರಾಮಸ್ಥರು, ಉಪಸ್ಥಿತರಿದ್ದರು.