ಜೆಸಿಐ ಶಿವಮೊಗ್ಗ ಮಲ್ನಾಡ್ ವತಿಯಿಂದ ದಿನಾಂಕ 29ರಂದು ಸುರಭಿ ಗೋಶಾಲೆಯಲ್ಲಿ ಐದನೇ ಸರ್ವಸದಸ್ಯರ ಸಭೆಯನ್ನು ವಿಶೇಷವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸುರಭಿ ಗೋಶಾಲೆಯಲ್ಲಿರುವ ಗೋವುಗಳಿಗೆ ಅವಶ್ಯವಿರುವ ಹುಲ್ಲು, ಮೇವು, ಬಾಳೆಹಣ್ಣು ಮತ್ತು ಹಿಂಡಿಯನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಜೆ.ಸಿ ಪ್ರದೀಪ್ ಎಸ್ ಕಾರ್ಯದರ್ಶಿಗಳಾದ ಜೆ.ಸಿ.ಸತ್ಯನಾರಾಯಣ ಹಾಗೂ ಘಟಕದ ಎಲ್ಲಾ ಪೂರ್ವ ಅಧ್ಯಕ್ಷರುಗಳು, ಸದಸ್ಯರುಗಳು ಭಾಗವಹಿಸಿದರು ಹಾಗೂ ನಮ್ಮ ಘಟಕದ ವತಿಯಿಂದ ದೇಣಿಗೆಯನ್ನು ಸಂಗ್ರಹಿಸಿ ಗೋಶಾಲೆಯ ಆಡಳಿತ ಮಂಡಳಿಗೆ ನೀಡಲಾಯಿತು.ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.