ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ನಡೆಸುತ್ತಿರುವ ಷಡ್ಯಂತರವನ್ನು ಖಂಡಿಸಿ- ಶೋಷಿತ ವರ್ಗಗಳ ಒಕ್ಕೂಟದಿಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನೆಗೆ ಮುತ್ತಿಗೆ – ಬಂಧನ.

ಕರ್ನಾಟಕ ಹಿಂದುಳಿದ ವರ್ಗಗಳ ನಾಯಕ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನ ನಾಯಕರು ರೂಪಿಸಿರುವ ಷಡ್ಯಂತರವನ್ನು ಖಂಡಿಸಿ ಕರ್ನಾಟಕ ಶೋಷಿತ ವರ್ಗಗಳ ಮಹಾ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದಿಂದ ಇಂದು ನಗರದ ಬೈಪಾಸ್ ರಸ್ತೆಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರುಗಳಾದ ಕೆ ರಂಗನಾಥ್ , ಡಾ.ಎಸ್.ಎಂ ಶರತ್ ಮರಿಯಪ್ಪ, ಎಂ ಪ್ರವೀಣ್ ಕುಮಾರ್, ವಿಜಯ್ ಕುಮಾರ್ ದನಿ, ಶಿವಣ್ಣ, ಹೆಚ್ ಪಾಲಾಕ್ಷಿ, ಕಟ್ಟ ಉಮೇಶ್,ಮಂಜುನಾಥ್ ನವುಲೆ , ಎಚ್‌ಪಿ ಗಿರೀಶ್ ಬಸವರಾಜ್ , ವಿನೋದ್, ಗುರುಪ್ರಸಾದ್ , ಎಸ್ ಕುಮಾರೇಶ್ , ರಾಹುಲ್ , ರಾಜೇಶ್ ಮಂದಾರ ,ಕೇಶವ, ಕೆ ಎಲ್ ಪವನ್ , ಶಿವಕುಮಾರ್ ,ನದೀಮ್ ಇರ್ಫಾನ್ , ಸಾಹಿಲ್ , ಸುರೇಶ್ ಹಾಗೂ ಶೋಷಿತ ವರ್ಗಗಳ ಸಮಾಜದ ಮುಖಂಡರುಗಳು ಮತ್ತು ಸಿದ್ದರಾಮಯ್ಯನ ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ