ಜೋನ್–11 ರೋಟರಿ ಕ್ರೀಡಾಕೂಟ 2025, ಸೆಂಟ್ರಲ್ ರೋಟಾ ಸ್ಪೋರ್ಟ್ಸ್ 25 ಕಾರ್ಯಕ್ರಮವು ಶಿವಮೊಗ್ಗದ ಮೌಂಟ್ ಕಾರ್ನರ್ ಸ್ಕೂಲ್ (ಕಂಟ್ರಿ ಕ್ಲಬ್ ಹತ್ತಿರ) ಮೈದಾನದಲ್ಲಿ ಭವ್ಯವಾಗಿ ಆಯೋಜಿಸಲಾಯಿತು. ಈ ಕ್ರೀಡಾಕೂಟದಲ್ಲಿ ಜೋನ್‌ನ ಏಳು ರೋಟರಿ ಕ್ಲಬ್‌ಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಶ್ರೇಷ್ಠ ಕ್ರೀಡಾತ್ಮಕ ಪ್ರದರ್ಶನ ನೀಡಿದವು.
ಕ್ರೀಡಾಕೂಟದಲ್ಲಿ ಎಲ್ಲಾ 7 ರೋಟರಿ ಕ್ಲಬ್‌ಗಳ ರೋಟರಿ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿಗಳು, ಪಾಸ್ಟ್ ಪ್ರಸಿಡೆಂಟ್‌ಗಳು ಮತ್ತು ಪಾಸ್ಟ್ AG ಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿ ಮೆಚ್ಚಿನ ಪ್ರದರ್ಶನ ನೀಡಿದ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಒಟ್ಟು ಅಂಕಗಳ ಆಧಾರದ ಮೇಲೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಗವರ್ನರ್ ಲಕ್ಷ್ಮಣ್ ಗೌಡ, ವಲಯ ಸೇನಾನಿ ಕಿರಣ್ ಕುಮಾರ್ ಜಿ.ಎನ್, ನಮ್ಮ ಕ್ಲಬ್‌ನ ಸ್ಪೋರ್ಟ್ಸ್ ಚೇರ್ಮನ್ ಧನಂಜಯ್, ಜೋನಲ್ ಸ್ಪೋರ್ಟ್ಸ್ ಚೇರ್ಮನ್ ಸಂತೋಷ್ ಬಿ.ಎ, ಮತ್ತು ಡಿಸ್ಟ್ರಿಕ್ಟ್ ಚೇರ್ಮನ್ ರವಿಕುಟೋಜಿ ಉಪಸ್ಥಿತರಿದ್ದರು. ಕ್ರೀಡಾಕೂಟವನ್ನು ವಸಂತ್ ಹೋಬಳಿಧರ್ ಉದ್ಘಾಟಿಸಿದರು.
ಈ ವರ್ಷದ ಕ್ರೀಡಾಕೂಟವನ್ನು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಯಶಸ್ವಿಯಾಗಿ ಆಯೋಜಿಸಿತು. ಕ್ಲಬ್‌ನ ಅಧ್ಯಕ್ಷ ಬಸವರಾಜ್ ಬಿ, ಕಾರ್ಯದರ್ಶಿ ಜಯಶೀಲ ಶೆಟ್ಟಿ, PDG ಜಿಎಂ ಪ್ರಕಾಶ್, ಧರ್ಮೇಂದ್ರ ಸಿಂಗ್, ರಮೇಶ್, ಸ್ಪೋರ್ಟ್ಸ್ ಚೇರ್ಮನ್ ಧನಂಜಯ್, ಮತ್ತು ಲೇಡಿ ರೋಟರಿಯನ್ಸ್ ಅನಸ್ಸಾ, ಆನೇಟ್, ಜಾನ್ಸ್ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಹಬ್ಬದ ವಾತಾವರಣವನ್ನು ತಂದರು. ಕ್ರೀಡಾ ಚಟುವಟಿಕೆಗಳ ಮೂಲಕ ಸ್ನೇಹ, ಒಗ್ಗಟ್ಟು ಮತ್ತು ಸಮಾಜ ಸೇವಾ ಮೌಲ್ಯಗಳನ್ನು ಬಲಪಡಿಸುವಲ್ಲಿ ಈ ಕೂಟ ಪ್ರಮುಖ ಪಾತ್ರವಹಿಸಿದೆ. ಕ್ರೀಡಾಕೂಟವು ರೋಟರಿ ಕುಟುಂಬದ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸುವುದಲ್ಲದೆ, ಸಮಾಜದಲ್ಲಿ ಸೇವಾ ಮನೋಭಾವವನ್ನು ಪ್ರಚೋದಿಸುವಂತೆ ಪ್ರೇರಣೆ ನೀಡಿತು.