ಶಿವಮೊಗ್ಗ ಸಂಚಾರ ವೃತ್ತ ಕಛೇರಿಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಇಲಾಖೆಯು (RTO) ಜಂಟಿಯಾಗಿ ಆಟೋ ಚಾಲಕರ ಮತ್ತು Rapido ಬೈಕ್ ಟ್ಯಾಕ್ಸಿ ಸವಾರರ ಸಭೆಯನ್ನು ಆಯೋಜಿಸಿದ್ದು, ಸದರಿ ಸಭೆಯಲ್ಲಿ, ಶ್ರೀ ಕಾರಿಯಪ್ಪ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಸಭೆಯಲ್ಲಿ ಭಾಗವಹಿಸಿ, ಸಭೆಯ ಕುರಿತು ಈ ಕೆಳಕಂಡಂತೆ ಮಾತನಾಡಿದರು.
- Rapido ಬೈಕ್ ಟ್ಯಾಕ್ಸಿ ಸವಾರರು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು
ಕಡ್ಡಾಯವಾಗಿ ಪಾಲನೆ ಮಾಡುವುದು. - ಆಟೋ ಚಾಲಕರು ತಮ್ಮ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿ
ಇರುವಂತೆ ನೋಡಿಕೊಳ್ಳುವುದು. - ಶಿವಮೊಗ್ಗ ನಗರದಲ್ಲಿ ಬಾಡಿಗೆ ಮಾಡುತ್ತಿರುವ ಕೆಲವು ಆಟೋ ರಿಕ್ಷಾಗಳ ಎಫ್.ಸಿ ಅವಧಿ
ಮುಕ್ತಾಯವಾಗಿದ್ದು, ಶೀಘ್ರವಾಗಿ RTO ಕಛೇರಿಗೆ ಬೇಟಿ ನೀಡಿ ತಮ್ಮ ಆಟೋ ರಿಕ್ಷಾಗಳ
ಎಫ್,ಸಿ ನವೀಕರಣ ಮಾಡಿಸಿಕೊಳ್ಳುವುದು. - ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಿದರು.
ಸದರಿ ಸಭೆಯಲ್ಲಿ, ಶ್ರೀ ಸಂಜೀವ್ ಕುಮಾರ್ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪವಿಭಾಗ, ಶ್ರೀ ಮುರಗೇಂದ್ರ ಬಿ ಶಿರೋಳ್ಕರ್, ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಶಿವಮೊಗ್ಗ, ಶ್ರೀ ದೇವರಾಜ್, ಸಿಪಿಐ ಶಿವಮೊಗ್ಗ ಸಂಚಾರ ವೃತ್ತ, ಶ್ರೀಮತಿ ಸ್ವಪ್ನಾ.ಎಲ್ ಪಿಎಸ್ಐ ಪಶ್ಚಿಮ ಸಂಚಾರ ಪೊಲೀಸ್ ಠಾಣೆ, ಶ್ರೀ ಅಕ್ಬರ್ ಮುಲ್ಲಾ ಪಿಎಸ್ಐ, ಪೂರ್ವ ಸಂಚಾರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಉಪಸ್ಥತರಿದ್ದರು.