ಮಂಜುನಾಥ್ ಶೆಟ್ಟಿ…
37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ–2026ರ ಅಂಗವಾಗಿ, ಶಿವಮೊಗ್ಗ ಸಂಚಾರಿ ವೃತ ಸಿಪಿಐ ದೇವರಾಜ್ ಅವರು ನೇತೃತ್ವದಲ್ಲಿ ನಗರದ ಸಂಚಾರ ಪೊಲೀಸ್ ಅಧಿಕಾರಿಗಳು ಶಿವಮೊಗ್ಗ ನಗರದ ಸಾಗರ ರಸ್ತೆಯ ಪೆಸಿಟ್ ಕಾಲೇಜಿನ ಸಮೀಪ ವಿಶೇಷ ಕಾರ್ಯಾಚರಣೆಯನ್ನು ನಡೆಸಿದರು.
ಸದರಿ ಕಾರ್ಯಾಚರಣೆಯ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತಿದ್ದ ಸವಾರರಿಗೆ ದಂಡ ವಿಧಿಸಿದರು.ಜೊತೆಗೆ ಕರ್ಕಶ ಶಬ್ದ ಉಂಟುಮಾಡುವ ರೀತಿಯ ಸೈಲೆನ್ಸರ್ ಅಳವಡಿಸಿಕೊಂಡಿದ್ದ 05 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ. ಇದಲ್ಲದೆ, ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.