ಮಂಜುನಾಥ್ ಶೆಟ್ಟಿ…

ಯಕ್ಷ ಸಂವರ್ಧನ ಶಿವಮೊಗ್ಗ ಇವರ ವತಿಯಿಂದ ಫೆಬ್ರವರಿ 28 ಮತ್ತು ಮಾರ್ಚ್ 1ರಂದು 2 ಯಕ್ಷಗಾನ ಪ್ರಸಂಗ ಸನ್ಮಾನ ವಾರ್ಷಿಕೋತ್ಸವ ಸಮಾರಂಭಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಆಚಾರ್ ತಿಳಿಸಿದ್ದಾರೆ.


ಫೆಬ್ರವರಿ 28ರಂದು ಸಂಜೆ 5:30ಕ್ಕೆ ಸೋಮಿಕೋ ಪದ ಶ್ರೀ ಪಂಚಮುಖಿ ಆಂಜನೇಯ ಮತ್ತು ಶ್ರೀ ಬನಶಂಕರಿ ದೇವಸ್ಥಾನದಲ್ಲಿ ದ್ರುಪದ ಗರ್ಭಭಂಗ ಮತ್ತು ಗುರುದಕ್ಷಿಣೆ ಎಂಬ ಯಕ್ಷಗಾನ ಪ್ರಸಂಗವನ್ನು ಅಭಿನಯಿಸಲಾಗುತ್ತದೆ. ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಮತ್ತು ಧರ್ಮದರ್ಶಿ ಆಶೀರ್ವಚನ ನೀಡುತ್ತಾರೆ. ಪ್ರಮುಖರಾದ ಗಣಪತಿ ಜಯಶೀಲ ಶೆಟ್ಟಿ ಪರಮೇಶ್ವರ್ ಹೆಗಡೆ ಶಶಿಕಾಂತ್ ಶೆಟ್ಟಿ ಪ್ರಥಮ್ ಮುಂತಾದವರು ಉಪಸ್ಥಿತರಿತಾರೆ.


ಮಾರ್ಚ್ 1ರಂದು ಸಂಜೆ 5:30ಕ್ಕೆ ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಸಮಂತ ಕಮಣಿ ವಿಳಾಸ ಮತ್ತು ವಿಂದಾನುವಿಂದ ಕಾಳಗ ಪ್ರಸಂಗ ನಡೆಯಲಿದೆ ಎಂದರು. ಈ ಎರಡು ಯಕ್ಷಗಾನಗಳಿಗೆ ಯಕ್ಷಗಾನ ಪ್ರಿಯರು ಆಗಮಿಸಿಬೇಕೆಂದು ಆಡಳಿತ ಮಂಡಳಿ ಕೋರಿದೆ.

Leave a Reply

Your email address will not be published. Required fields are marked *