ಮಂಜುನಾಥ ಶೆಟ್ಟಿ…

ಶಿವಮೊಗ್ಗದ ತಿಲಕ್ ನಗರ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಮೂರು ಅಂತರಾಷ್ಟ್ರೀಯ ISO ಪ್ರಮಾಣಿಕರಣಗಳು ಲಭಿಸಿರುವುದು ಸಮಿತಿ ಎಲ್ಲಾ ಸದಸ್ಯರು ದಾನಿಗಳಿಗೂ ಹಾಗೂ ಭಕ್ತರಿಗೆ ಎಂದು ಸಮಿತಿಯ ಕಾರ್ಯದರ್ಶಿ ಸುರೇಶ್ ತಿಳಿಸಿದರು.


ಸಮಿತಿಯು ಹಲವು ವರ್ಷಗಳಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದದೊಂದಿಗೆ ಧಾರ್ಮಿಕ ಸಾಮಾಜಿಕ ಹಾಗೂ ಜನಪಯೋಗಿ ಸೇವಾ ಕಾರ್ಯಗಳನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿರುವುದು ಗುರುತಿಸಿ ಪ್ರಾಮಾಣಿಕರಣಗಳ ಲಭಿಸಿದೆ ಎಂದರು.
ಸಮಿತಿಯು ಗುಣಮಟ್ಟದ ನಿರ್ವಹಣಾ ವ್ಯವಸ್ಥೆ ಪರಿಸರ ನಿರ್ವಹಣೆ ವ್ಯವಸ್ಥೆ ಹಾಗೂ ಸಂರಕ್ಷಣಾ ನಿರ್ವಹಣಾ ವ್ಯವಸ್ಥೆಗಳನ್ನು ಗುರುತಿಸಿ ಪ್ರಶಸ್ತಿ ಲಭಿಸಿದೆ. ಸಂಸ್ಥೆ ಆಡಳಿತದಲ್ಲಿ ಪಾರದರ್ಶಕತೆಯನ್ನು ಬುಡಮಟ್ಟ ಪರಿಸರ ಕಾಳಜಿ ಸುರಕ್ಷತೆ ಬಗ್ಗೆ ಸಮಿತಿ ಪದ್ಧತಿಯನ್ನು ಜಾಗತಿಕ ಮಟ್ಟದಲ್ಲಿ ದೃಢೀಕರಿಸುವ ಮಾನ್ಯಗಳಾಗಿವೆ ಎಂದರು.


ಸಮಿತಿಯು ಮಠದ ಸೇವಾ ನಿರ್ವಹಣೆ ಭಕ್ತ ಸೇವೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವೈದ್ಯಕೀಯ ಶಿಬಿರಗಳು ಹಾಗೂ ಶಾಲಾ ದತ್ತು ಯೋಜನೆಗಳು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿರುವುದನ್ನು ಈ ಪ್ರಾಮಾಣಿಕರಣವು ದೃಢ ಪಡಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಸೇವೆಯ ಮೂಲಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಹಮ್ಮಿಕೊಂಡು ಸಮಿತಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸೇವಾ ಸಮಿತಿಗಳನ್ನಾಗಿ ರೂಪಿಸುವ ಸಂಕಲ್ಪ ಹೊಂದಿದೆ ಎಂದರು.


ISO ಪ್ರಾಮಾಣಿಕರಣವು ನಮ್ಮ ಸಾಧನೆ ಅಂತ್ಯವಲ್ಲ. ಇನ್ನಷ್ಟು ಜವಾಬ್ದಾರಿಯುತ ಪಾರದರ್ಶಕ ಹಾಗೂ ಸಮಾಜಮುಖಿ ಸೇವೆಗೆ ಹೊಸ ಆರಂಭವಾಗಿದೆ. ಈ ಪ್ರಶಸ್ತಿಯನ್ನು ಸಾರ್ವಜನಿಕವಾಗಿ ಉಡುಪಿಯ ಅಧಮಾರು ಮಠದ ಸ್ವಾಮೀಜಿ ವಿಶ್ವಪ್ರಿಯ ತೀರ್ಥ ಶ್ರೀ ಪಾದಗಳು ಮಠದಲ್ಲಿ ಸೋಮವಾರ ನಡೆದ ಭಾಗವತ ಪ್ರವಚನ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿರು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಲಕ್ಷ್ಮಿಕಾಂತ್ ಖಜಾಂಚಿ ಗುರುಪ್ರಸಾದ್ ನಿರ್ದೇಶಕರಾದ ಶ್ರೀನಿವಾಸ್ ಜೋಶಿ ನಾಗರಾಜ್ ಶಿವರಾಮ್ ಹೆಬ್ಬಾರ್ ಮಠದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಘವೇಂದ್ರ ಮೂರ್ತಿ ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *