ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಮತ್ತು ಅಡುಗೆ ಅನಿಲ ಹಾಗೂ ವಾಣಿಜ್ಯ ಬಳಕೆಯ ಅನಿಲ ಮತ್ತು ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಗದಪ್ರಹಾರ ಮಾಡಿದ್ದನ್ನು ಖಂಡಿಸಿ ಕಟ್ಟಿಗೆ ಒಲೆಯಲ್ಲಿ ಬೆಂಕಿ ಹಚ್ಚಿ ಚಹಾ ತಯಾರಿಸಿ ಸಾರ್ವಜನಿಕರಿಗೆ ವಿತರಿಸುವುದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಶ್ವೇತಾ ಬಂಡಿ ಮಾತನಾಡಿ ಕೇಂದ್ರ ಸರ್ಕಾರ ಯುದ್ಧದ ನೆಪ ಹೇಳಿಕೊಂಡು ಬಡವರ ಮೇಲೆ ಬರೆ ಎಳೆದಿದೆ. ದಿನ ಬಳಕೆ ಗ್ಯಾಸ್ ಸಿಲೆಂಡರ್ ಮೇಲೆ 60 ರೂಪಾಯಿ ಹಾಗೂ ವಾಣಿಜ್ಯ ಸಿಲಿಂಡರ್ ಮೇಲೆ ಅವರ 15 ರೂಪಾಯಿ ಬೆಲೆ ಏರಿಸಿ ತನ್ನ ದಿವಾಳಿತನವನ್ನು ತೋರಿಸಿದೆ. ರಾಜ್ಯ ಸರ್ಕಾರ ಮಹಿಳೆಯರಿಗೆ ಅನ್ನಭಾಗ್ಯ ಶಕ್ತಿ ಯೋಜನೆ, ಗೃಹಲಕ್ಷ್ಮಿ ಮೂಲತಃ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದರೆ ಕೇಂದ್ರ ಸರ್ಕಾರ ಮಹಿಳೆಯರ ಮೇಲೆ ಬೆಲೆ ಏರಿಕೆಯ ಗದ ಪ್ರಹಾರ ಮಾಡಿದೆ.
ಪ್ರಧಾನಿ ಮೋದಿ ವಿಶ್ವ ಗುರು ಅಲ್ಲ ಎಂಬುದು ಸಾಬೀತಾಗಿದೆ. ಅವರು ದುರ್ಬಲವಾಗಿರುವುದಕ್ಕೆ ಕೇಂದ್ರ ಸರ್ಕಾರ ಈ ರೀತಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೇ ಎಳೆದಿದೆ. ಅವರು ದೇಶದ ಜನರ ಕ್ಷಮೆ ಕೇಳಬೇಕು. ತಾವು ದುರ್ಬಲರು ಎಂಬುದನ್ನು ಒಪ್ಪಿಕೊಳ್ಳಬೇಕು. ಸಿಲಿಂಡರ್ ಬೆಲೆ ಇಳಿಯವರೆಗು ಮಹಿಳೆಯರು ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ಪ್ರಮುಖರಾದ ರಮೇಶ್ ವಿಜಯ್ ಕುಮಾರ್ ರವಿ ಕುಮಾರ್ ಯೋಗೇಶ್ ಚಂದ್ರಗುಪಾಲ್ ಶಿವಕುಮಾರ್ ಶಿವಾನಂದ್ ಶೆಟ್ಟಿ ಚಂದ್ರಶೇಖರ್ ರಾಜಶೇಖರ್ ಪುಷ್ಪ ಶಿವಕುಮಾರ್ ಶೇಷಾದ್ರಿ ಗಂಗಾಧರ್ ಹಾಲಪ್ಪ ಭಾರತಿ ರಾಮಕೃಷ್ಣ ಸುವರ್ಣ ನಾಗರಾಜ್ ಮಾನಸ ರಮೇಶ್ ಭವ್ಯ ಕೃಷ್ಣಮೂರ್ತಿ ಯಮುನಾ ರಂಗೇಗೌಡ ಸ್ಟೈಲ್ ಮಾರ್ಟಿನ್ ಪ್ರಭಾವತಿ ಚಂದ್ರಶೇಖರ್ ನಾಗರತ್ನ ಕವಿತಾ ವೇದಾ ವಿಜಯ್ ಕುಮಾರ್ ವಿಜಯಲಕ್ಷ್ಮಿ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.