ಮಂಜುನಾಥ್ ಶೆಟ್ಟಿ…


ಶಿವಮೊಗ್ಗ ಜಿಲ್ಲೆಯಲ್ಲಿ ದೂರಸಂಪರ್ಕ ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ವತಿಯಿಂದ ಕೈಗೊಳ್ಳಲಾಗಿರುವ 4ಜಿ ಸ್ಯಾಚುರೇಷನ್ ಯೋಜನೆಯನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಸದರಾದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಬಿ.ಎಸ್.ಎನ್.ಎಲ್ ದೂರಸಂಪರ್ಕ ಸಲಹಾ ಸಮಿತಿ (ಟಿಎಸಿ)ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
4ಜಿ ಸ್ಯಾಚುರೇಷನ್ ಯೋಜನೆಯ 1 ರಿಂದ 4 ನೇ ಕೆಟಗರಿ ಕೆಲಸಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಟವರ್ ಅಳವಡಿಕೆಗೆ ಸಂಬAಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಅರಣ್ಯ ಭೂಮಿ ವಿಷಯಕ್ಕೆ ಸಂಬAಧಿಸಿದ ಸಮಸ್ಯೆ ಕುರಿತು ಶಿವಮೊಗ್ಗ ಮತ್ತು ಕಾರ್ಕಳ ಸಿಸಿಎಫ್ ಬಳಿ ಚರ್ಚಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಕೆಟಗರಿ 5 ರಿಂದ 7 ಕ್ಕೆ ಸಂಬAಧಿಸಿದ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ತಿಳಿಸಿದ ಅವರು ಇನ್ನು ಒಂದು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳಿಸಿ. ಜಿಲ್ಲೆಯಾದ್ಯಂತ ದೂರಸಂಪರ್ಕ ಸೇವೆಗಳನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಜಿಲ್ಲೆಯ ಗ್ರಾಮೀಣ ಮತ್ತು ಮಲೆನಾಡು ಭಾಗಗಳಲ್ಲಿ ನೆಟ್‌ವರ್ಕ್ ಸಮಸ್ಯೆಗಳನ್ನು ಬಗೆಹರಿಸುವುದು, 4ಜಿ ಮತ್ತು 5ಜಿ ಸೇವೆಗಳ ವಿಸ್ತರಣೆ ಹಾಗೂ ಬಿ.ಎಸ್.ಎನ್.ಎಲ್ ಫೈಬರ್ ಇಂಟರ್ನೆಟ್ ಸಂಪರ್ಕವನ್ನು ಮನೆ ಮನೆಗೆ ತಲುಪಿಸಲು ಕ್ರಮ ವಹಿಸಬೇಕು ಎಂದ ಅವರು ಡಿಜಿಟಲ್ ಇಂಡಿಯಾ ಕನಸನ್ನು ಸಾಕಾರಗೊಳಿಸಲು ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.


4ಜಿ ಸ್ಯಾಚುರೇಷನ್ ಯೋಜನೆ ಪ್ರಗತಿ…

ಈ ಯೋಜನೆಯಡಿ 287 ಗ್ರಾಮಗಳು ಬರಲಿದ್ದು 134 ಸ್ಥಳಗಳಲ್ಲಿ(ಸೈಟ್) ಟವರ್ ಅಳವಡಿಕೆಗೆ ಪ್ರಸ್ತಾಪಿಸಲಾಗಿದೆ. 17 ಸೈಟ್‌ಗಳು ಗ್ರಾ.ಪಂ ವ್ಯಾಪ್ತಿಯಲ್ಲಿ, 6 ಖಾಸಗಿ, 48 ಕಂದಾಯ, 46 ಅರಣ್ಯ, ಮತ್ತು 17 ಸೈಟ್‌ಗಳು ವನ್ಯಜೀವಿ ವ್ಯಾಪ್ತಿಗೆ ಬರಲಿದೆ. ಈಗಾಗಲೇ 111 ಸ್ಥಳಗಳಲ್ಲಿ ಟವರ್‌ಗಳನ್ನು ಅಳವಡಿಕೆ ಆಗಿದೆ. 8 ಸ್ಥಳಗಳಲ್ಲಿ ಟವರ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. 3 ತಡೆಹಿಡಿಯಲಾಗಿದ್ದು, 12 ವನ್ಯಜೀವಿ ವ್ಯಾಪ್ತಿಯ ಕ್ಲಿಯರೆನ್ಸ್ಗೆ ಬಾಕಿ ಇದೆ ಎಂದರು.


ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ಇನ್ಫ್ರಾ ಕೆಲಸ ನಡೆಯುತ್ತಿದ್ದು ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಿದ ಅವರು ಶಿಕಾರಿಪುರದ ಮಲ್ಲೇನಹಳ್ಳಿ , ಸೊರಬದ ಕಾನಹಳ್ಳಿ, ಬರಿಗೆ ಸೇರಿದಂತೆ ತಡೆಹಿಡಿಯಲಾದ ಟವರ್ ಗಳ ಕುರಿತು ಪರಿಶೀಲಿಸಿ, ಪ್ರಸ್ತಾವನೆ ಕೈಬಿಡದೆ ಪರಿಗಣಿಸಬೇಕೆಂದು ತಿಳಿಸಿದರು.
ಕೆಟಗರಿ 7 ಕ್ಕೆ ಸಂಬAಧಿಸಿದAತೆ ಸರ್ವೇ ಕಾರ್ಯ ಸಮರ್ಪಕವಾಗಿ ಮಾಡಲು ಹಾಗೂ ಬಾಕಿ ಇರುವ ಸರ್ವೇ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಭಾರತ್ ನೆಟ್ , ಸಮೃದ್ದಿ ಗ್ರಾಮ ಯೋಜನೆಯ ಪ್ರಗತಿ ಪರಿಶೀಲಿಸಿದರು. ಟವರ್ ಕಮಿಷನಿಂಗ್ ವಿಷಯಕ್ಕೆ ಸಂಬAಧಿಸಿದAತೆ ಸಮಸ್ಯೆಗಳೇನಾದರೂ ಇದ್ದಲ್ಲಿ ಸ್ಥಳೀಯ ಸದಸ್ಯರ ಸಹಕಾರ ತೆಗೆದುಕೊಂಡು ಪರಿಹರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.


ಬಿಎಸ್‌ಎನ್‌ಎಲ್ ವೈಫೈ ಕರೆ ಸೇವೆಗಳು, ವಿದ್ಯಾ ಮಿತ್ರ, ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಬಿಎಸ್‌ಎನ್‌ಎಲ್ ಪ್ರಧಾನ ವ್ಯವಸ್ಥಾಪಕರಾದ ವಿನಯ್ ಕುಮಾರ್ ಸಿನ್ಹಾ, ಡಿಜಿಎಂ ಸಮಿತಾ ಸರ್ಕಾರ್, ಎಜಿಎಂ ಗಳಾದ ರೂಬನ್ ವಿಜಯ ಸಿಂಗ್, ಗಿರೀಶ್ ಮೂಲಭಾರತಿ, ಅವರು ಹಾಗೂ ದೂರವಾಣಿ ಸಲಹಾ ಸಮಿತಿಯ ಸದಸ್ಯರು ಮತ್ತು ಬಿಎಸ್‌ಎನ್‌ಎಲ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *