ಮಂಜುನಾಥ್ ಶೆಟ್ಟಿ…
ಶಿವಮೊಗ್ಗದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ಸಂಚಾರಿ ಪೀಠ ಸ್ಥಾಪಿಸಬೇಕೆಂದು ಜಿಲ್ಲಾ ವಕೀಲರ ಸಂಘ ನಡೆಸುತ್ತಿರುವ ಹೋರಾಟಕ್ಕೆ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ (ರಿ.) ವತಿಯಿಂದ ಅಧಿಕೃತವಾಗಿ ಬೆಂಬಲ ಘೋಷಿಸಲಾಯಿತು.ನಗರದ ನ್ಯಾಯಾಲಯದ ಆವರಣದಲ್ಲಿ ಇಂದು ನಡೆಯುತ್ತಿದ್ದ ಹೋರಾಟದಲ್ಲಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಪದಾಧಿಕಾರಿಗಳು ವಕೀಲರ ಸಂಘದ ಅಧ್ಯಕ್ಷರಿಗೆ ಬೆಂಬಲ ಪತ್ರ ಹಸ್ತಾಂತರಿಸಿದರು.
ವಕೀಲರ ಹೋರಾಟಕ್ಕೆ ಸಾಥ್ ನೀಡಿದ ಶಿವಮೊಗ್ಗ ಸಿಟಿ ಕರಾಟೆ ಸಂಘದ ಅಧ್ಯಕ್ಷ ಶಿವಮೊಗ್ಗ ವಿನೋದ್ ಮಾತನಾಡಿ, “ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಚಿತ್ರದುರ್ಗ ಉತ್ತರ ಕನ್ನಡ ಜಿಲ್ಲೆಗಳ ಜನರು ಒಂದು ಕೇಸ್‌ಗಾಗಿ ಬೆಂಗಳೂರಿಗೆ 300 ಕಿ.ಮೀ ಅಲೆಯಬೇಕು. ದಿನಗೂಲಿ ಬಿಟ್ಟು, ದುಡ್ಡು ಖರ್ಚು ಮಾಡಿ ಹೋಗುವ ಸ್ಥಿತಿ ಬಡವರಿಗೆ ಇದೆ. ಕ್ರೀಡಾಪಟುಗಳು ತರಬೇತಿ ಬಿಟ್ಟು ಕೋರ್ಟ್ ಅಲೆಯುತ್ತಿದ್ದಾರೆ. ಶಿವಮೊಗ್ಗದಲ್ಲಿ ಪೀಠ ಬಂದರೆ ‘ನ್ಯಾಯ ವಿಳಂಬ, ನ್ಯಾಯ ನಿರಾಕರಣೆ’ ತಪ್ಪುತ್ತದೆ. ಇದು ಕೇವಲ ವಕೀಲರ ಬೇಡಿಕೆ ಅಲ್ಲ, ಇಡೀ ಮಲೆನಾಡಿನ ಜನರ ಬೇಡಿಕೆ. ಆದ್ದರಿಂದ ಸರ್ಕಾರ ತಕ್ಷಣ ಸ್ಪಂದಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಗೌರವಾಧ್ಯಕ್ಷ ಬಸಪ್ಪ ಗೌಡರು ಅಧ್ಯಕ್ಷರಾದ ರಾಘವೇಂದ್ರ ಸ್ವಾಮಿ ಕರಾಟೆ ಅಸೋಸಿಯೇಷನ್ ಕಾರ್ಯದರ್ಶಿ ಅನುಪ್ ಆರ್ ಶೇಖರ್, ಖಜಾಂಚಿ ಶ್ರೇಯಸ್ ಎಚ್.ಎಲ್, ಭದ್ರಾವತಿ ತಾಲ್ಲೂಕು ಕರಾಟೆ ಸಂಘದ ಅಧ್ಯಕ್ಷ ಬಾಲರಾಜ್, ಕಾನೂನು ಸಲಹೆಗಾರ ಚಂದ್ರಕುಮಾರ್ ಹಾಗೂ ಪದಾಧಿಕಾರಿಗಳಾದ ಜಸ್ಟಿನ್, ಶರವಣ, ಮಲ್ಲಿಕಾರ್ಜುನ್, ಕಿಶೋರ್ ಉಪಸ್ಥಿತರಿದ್ದರು.