ಮಂಜುನಾಥ ಶೆಟ್ಟಿ…
ಬೆಂಗಳೂರು ಜೂ. 22: ಕೆಪಿಸಿಸಿಗೆ ನೂತನವಾಗಿ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿರುವ ಬಿ.ಕೆ. ಹರಿ ಪ್ರಸಾದ್ ಇವರನ್ನು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ ಗೌಡ ಇವರು ಅಭಿನಂದಿಸಿದರು.
ತಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಿಷ್ಠ ಗೊಳ್ಳಲಿ, ಆ ನಿಟ್ಟಿನಲ್ಲಿ ನಮ್ಮ ಪೂರ್ಣ ಸಹಕಾರ ಇರುವುದಾಗಿ ತಿಳಿಸಿ ನೂತನ ಶುಭ ಅಧ್ಯಕ್ಷರಿಗೆ ಕೋರಿದರು.
ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರು ಹಾಗೂ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಎಂ ಶ್ರೀಕಾಂತ್, ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ರಮೇಶ್ ಶಂಕರಘಟ್ಟ, ತೀರ್ಥಹಳ್ಳಿ ತಾಲೂಕು ಗ್ರಾಮಾಂತರ ಹಿಂದುಳಿದ ವರ್ಗಗಳ ವಿಭಾಗದ ಬ್ಲಾಕ್ ಅಧ್ಯಕ್ಷರಾದ ಲೋಕೇಶ್ ಕರಕುಚ್ಚಿ ಮತ್ತಿತರು ಇದ್ದರು.