ಮಂಜುನಾಥ ಶೆಟ್ಟಿ…
ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಫಲಾನುಭವಿಗಳ ಜಾತಿ ಪ್ರಮಾಣ ಪತ್ರವನ್ನು ಪಡೆಯುತ್ತಿರುವ ಎಲ್ಲಾ ತಾಲೂಕು ಕಚೇರಿಗಳಲ್ಲಿ ಬೆಳಿಗ್ಗೆ 6:00 ಗಂಟೆಯಿಂದ ಜನರು ತಮ್ಮ ಎಲ್ಲಾ ಕೆಲಸಗಳನ್ನು ಬಿಟ್ಟು ಸರತಿಯಲ್ಲಿ ನಿಂತು ಜಾತಿ ಪ್ರಮಾಣ ಪತ್ರವನ್ನು ಪಡೆಯಲು ಮುಂದಾಗಿದ್ದಾರೆ.ಕಾರಣ ಎಲ್ಲಾ ಪಡಿತರ ಅಂಗಡಿಗಳಲ್ಲಿ ಜಾತಿ ಪ್ರಮಾಣ ಪತ್ರ ಒದಗಿಸದೆ ಹೊರತು ಪಡಿತರ ನೀಡುವುದಿಲ್ಲ ಎಂದು ತಿಳಿಸಿರುವುದು ಎಂದು ತಿಳಿದುಬಂದಿದೆ.
ಇದನ್ನು ಪರಿಶೀಲನೆ ಮಾಡಿದಾಗ ಎಸ್ಸಿ ಎಸ್ಟಿ ಸಮುದಾಯಕ್ಕೆ ಸೇರಿದಂತೆ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ಸಿಗುವ ಅನುದಾನಗಳನ್ನು ಕೊಡಲು ಈ ಒಂದು ನಿಯಮವನ್ನು ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಆದರೆ ಎಸ್ಸಿ ಎಸ್ಟಿ ಸಮುದಾಯಕ್ಕೆ ಬರುವ ಸ್ಕೀಮ್ ಗಳನ್ನು ಕೊಡಲು ಇತರೆ ಸಮುದಾಯದ ಜನರ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಲಿಕ್ಕೆ ಹೇಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಸಂಘಟನೆಯ ಪ್ರಶ್ನೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಲಿಖಿತ ರೂಪದ ಯಾವುದೇ ಆದೇಶ ಪತ್ರ ಇರುವುದಿಲ್ಲ.ಅಥವಾ ಜಿಲ್ಲಾಡಳಿತದಿಂದ ಇಂತಹ ಯಾವುದೇ ಆದೇಶಪತ್ರ ಇದುವರೆಗೂ ಪ್ರಕಟಿಸಿರುವುದಿಲ್ಲ.ಎಂಬುದು ಮನಗಂಡು ಸಾರ್ವಜನಿಕರಿಗೆ ಬಡವರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಮ್ಮಲ್ಲಿ ತಿಳಿಸುತ್ತಿದ್ದೇವೆ.ದಯಾಪರರಾದ ತಾವು ಈ ಒಂದು ಅಘೋಷಿತ ನಿಯಮದಿಂದ ಮತ್ತು ಆಹಾರ ಇಲಾಖೆಯ ಮೌಖಿಕ ನಿಯಮದಿಂದ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆಯನ್ನು ಪರಿಹರಿಸಿ ಕೊಡಬೇಕು ಮತ್ತು ಆಹಾರ ಇಲಾಖೆಗೆ ಕಟ್ಟುನಿಟ್ಟಿನ ಸೂಕ್ತ ಕ್ರಮವನ್ನು ಜರುಗಿಸಬೇಕೆಂದು ತಮ್ಮಲ್ಲಿ ಸಾರ್ವಜನಿಕರ ಪರವಾಗಿ ವಿನಂತಿಸಿದರು.
ಈ ಮೇಲಿನ ವಿಷಯಗಳು ಸತ್ಯ ವಿಚಾರವಾಗಿದ್ದು ತಾವು ಪರಿಶೀಲಿಸುವುದಾದರೆ ಶಿವಮೊಗ್ಗದ ಪಡಸಾಲೆಯಲ್ಲಿ ಜನರು ಬೆಳಗ್ಗೆ ನಿಂದಲೂ ಸರತಿಯ ಸಾಲನ್ನು ಕಟ್ಟಿ ನಿಲ್ಲುತ್ತಿರುವುದನ್ನು ತಾವೇ ವೀಕ್ಷಿಸಿ ಸಾರ್ವಜನಿಕರ ಸಮಸ್ಯೆಯನ್ನು ಕಾಣಬಹುದಾಗಿದೆ.ದಯಮಾಡಿ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕು ಎನ್ನುತ್ತಿರುವ ಪಡಿತರ ಅಂಗಡಿಯವರಿಗೂ ಮತ್ತು ಜಿಲ್ಲೆಯಾದ್ಯಂತ ಎಲ್ಲಾ ಆಹಾರ ಇಲಾಖೆಯ ಸಿಬ್ಬಂದಿಗಳಿಗೆ ತಿಳಿಯುವಂತೆ ಆದೇಶ ಪ್ರತಿಯನ್ನು ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತಿದ್ದೇನೆ.