ಮಂಜುನಾಥ ಶೆಟ್ಟಿ…
ಕರ್ನಾಟಕ ಸರ್ಕಾರದ ಸಾರಿಗೆ ಸಚಿವರು, ಅಹಿಂದ ವರ್ಗದ ನಾಯಕ ಸನ್ಮಾನ್ಯ ಶ್ರೀ ಬೈರತಿ ಸುರೇಶ್ ರವರ ಹುಟ್ಟುಹಬ್ಬದ ಅಂಗವಾಗಿ ಇಂದು ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರ ನೇತೃತ್ವದಲ್ಲಿ ನಗರದ ಮೆಗನ್ ಆಸ್ಪತ್ರೆ ಆವರಣದಲ್ಲಿ ಅನ್ನದಾಸೋಹ ನಡೆಸುವ ಮುಖಾಂತರ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್ ಅವರು ಚಾಲನೆ ನೀಡಿ ನಂತರ ಮಾತನಾಡಿದ ಅವರು ಅನ್ನದಾಸೋಹ ಕಾರ್ಯಕ್ರಮ ಪುಣ್ಯದ ಕೆಲಸವಾಗಿದ್ದು ನಮ್ಮ ರಾಜ್ಯದ ನಾಯಕರು, ಸಚಿವರಾದ ಬೈರತಿ ಸುರೇಶ್ ರವರಿಗೆ ಹುಟ್ಟುಹಬ್ಬವನ್ನು ಸಾಮಾಜಿಕ ಕಾರ್ಯಕ್ರಮದ ಮುಖಾಂತರ ಯುವ ಕಾಂಗ್ರೆಸ್ ಸಮಿತಿ ಆಚರಿಸುತ್ತಿರುವುದು ಶ್ಲಾಘಿನಿಯ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ ರವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಅಹಿಂದ ವರ್ಗಗಳಿಗೆ ಧ್ವನಿ, ಸಚಿವರಾದ ಬೈರತಿ ಸುರೇಶ್ ರವರ ಹುಟ್ಟು ಹಬ್ಬವನ್ನು ಇಂದು ಹಲವಾರು ವಿಶೇಷ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿದ್ದು ಭಗವಂತ ಅವರಿಗೆ ಈ ರಾಜ್ಯದ ಜನರ ಸೇವೆ ಮಾಡಲು ಇನ್ನು ಹೆಚ್ಚಿನ ಶಕ್ತಿ ಮತ್ತು ಉನ್ನತ ಮಟ್ಟದ ಅಧಿಕಾರ ಸಿಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೂಡ ಸದಸ್ಯರಾದ ಎಮ್ .ಪ್ರವೀಣ್ ಕುಮಾರ್, ಹಾಪ್ ಕಾಮ್ಸ್ ನಿರ್ದೇಶಕರಾದ ಶರತ್ ಮರಿಯಪ್ಪ, ಎಸ್ಸಿ ಘಟಕದ ಅಧ್ಯಕ್ಷರಾದ ಎಮ್ ಶಿವಣ್ಣ ,ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಹೆಚ್.ಪಿ .ಗಿರೀಶ್, ಪಂಚ ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಎಮ್ ರಾಹುಲ್, ಎಸ್ ಕುಮಾರೇಶ್, ಬಸವರಾಜ್, ಪ್ರಮುಖರಾದ ಟಿ ಗುರುಪ್ರಸಾದ್ ,ಕೆಎಲ್ ಪವನ್, ಎಂ ರಾಕೇಶ್, ನದೀಮ್, ರಾಹುಲ್ ಸಿಗೆಹಟ್ಟಿ, ರಾಜೇಶ್ ಮಂದಾರ, ಮನ್ವಿತ್ ಜೈನ್,ರಜನಿಕಾಂತ್, ಸುಬ್ರಮಣಿ, ಪ್ರದೀಪ್ ರಾಮನಕೊಪ್ಪ, ಶಿವಕುಮಾರ್ ಪುನೀಲ,ಮಿಥುನ್, ಶಮ್ಮುದ್ದೀನ್ ಉಪಸ್ಥಿತರಿದ್ದರು.