ಮಂಜುನಾಥ ಶೆಟ್ಟಿ…

ಶಿವಮೊಗ್ಗ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ನೋಟಿಸ್‌ಗಳು ಅಥವಾ ಇ-ಚಲನ್‌ಗಳ ಲಿಂಕ್‌ಗಳನ್ನು ವಾಹನದ ಮಾಲೀಕರ ಮೊಬೈಲ್‌ನ ವಾಟ್ಸಾಪ್‌ಗೆ ಕಳುಹಿಸಲಾಗುವುದಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ಸಂಚಾರಿ ಪೊಲೀಸ್ ಸ್ಪಷ್ಟ ಪಡಿಸಿದೆ.

ಆದ್ದರಿಂದ, ವಾಟ್ಸಾಪ್ ಮೂಲಕ ಬರುವ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಯಾವುದೇ ಲಿಂಕ್‌, APK ಫೈಲ್ ಅಥವಾ ಅಪರಿಚಿತ ಸಂದೇಶಗಳ ಮೇಲೆ ಕ್ಲಿಕ್ ಮಾಡಬೇಡಿ ಹಾಗೂ ಅವನ್ನು ಡೌನ್‌ಲೋಡ್ ಮಾಡಬೇಡಿ.

ಇವು ಸೈಬರ್ ವಂಚನೆಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕು.
ಯಾವುದೇ ಸಂದೇಹಗಳಿದ್ದಲ್ಲಿ ಸಮೀಪದ ಸಂಚಾರ ಪೊಲೀಸ್ ಠಾಣೆ ಅಥವಾ ಶಿವಮೊಗ್ಗ ಟ್ರಾಫಿಕ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಸಂಪರ್ಕಿಸಿ ಎಂದು ಸಂಚಾರಿ ಸಿಪಿಐ ದೇವರಾಜ್ ಟಿವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *