ಮಂಜುನಾಥ ಶೆಟ್ಟಿ…

ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ರವರ ಹುಟ್ಟುಹಬ್ಬ ಸಮಾಜ ಮುಖಿಯಾಗಿ ನಡೆಯಿತು. ಹುಟ್ಟು ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರದ ಮೂಲಕ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರಿಂದ ಬಂದಿರುವ ಈ ಆತ್ಮೀಯ ಜನ್ಮದಿನದ ಶುಭಾಶಯಗಳ ಪತ್ರವು ನನಗೆ ಅತ್ಯಂತ ಹೆಮ್ಮೆಯ ಮತ್ತು ಭಾವುಕ ಕ್ಷಣ.

​ಮಲೆನಾಡಿನ ಹೆಬ್ಬಾಗಿಲಾದ ನಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾವು ಧೃಢಸಂಕಲ್ಪ ತೊಟ್ಟಿದ್ದೇವೆ. ಕುವೆಂಪು ವಿಮಾನ ನಿಲ್ದಾಣ, ನೂತನ ರೈಲ್ವೆ ಮಾರ್ಗಗಳು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಹಲವು ಯೋಜನೆಗಳ ಮೂಲಕ ಕ್ಷೇತ್ರವನ್ನು ವಿಕಸಿತ ಶಿವಮೊಗ್ಗವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದೇವೆ.

​ಮೋದಿಜೀಯವರ ಈ ಆಶೀರ್ವಾದದ ನುಡಿಗಳು ನಮ್ಮ ಶಿವಮೊಗ್ಗ ಕ್ಷೇತ್ರದ ಪ್ರತಿಯೊಬ್ಬ ನಾಗರಿಕರಿಗೂ ಸಲ್ಲಬೇಕಾದ ಗೌರವ. ಸಂಸದನಾಗಿ ಕ್ಷೇತ್ರದ ಕೊನೆಯ ವ್ಯಕ್ತಿಯವರೆಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಫಲಗಳನ್ನು ತಲುಪಿಸಲು ಹಾಗೂ ವಿಕಸಿತ ಭಾರತ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಈ ಪತ್ರ ನನಗೆ ಮತ್ತಷ್ಟು ಶಕ್ತಿ ತುಂಬಿದೆ.

ನಿಮ್ಮ ದಿವ್ಯ ಮಾರ್ಗದರ್ಶನಕ್ಕೆ ಮತ್ತು ನನ್ನ ಮೇಲಿಟ್ಟಿರುವ ಅಚಲ ನಂಬಿಕೆಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *