ಮಂಜುನಾಥ್ ಶೆಟ್ಟಿ…

ಸಹ್ಯಾದ್ರಿ ಕೃಷಿ ಸಂತೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ಇವರಿಂದ ಸೆಪ್ಟೆಂಬರ್ 5 ಮತ್ತು 6ನೇ ತಾರೀಕು ಸಹ್ಯಾದ್ರಿ ಕೃಷಿ ಸಂತೆಯನ್ನು ಏರ್ಪಡಿಸಲಾಗಿದೆ. ಈ ಕೃಷಿ ಸಂತೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಧನಂಜಯ ಎಂ ವಿ. ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಈ ಕೃಷಿ ಸಂತೆಯು ರೈತರಿಗೆ ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಬೆಳೆಗಳ ಬಗ್ಗೆ ಮಾಹಿತಿ, ಬೀಜಗಳ ಲಭ್ಯತೆ ಮತ್ತು ಉತ್ತಮ ಗುಣಮಟ್ಟದ ಸಸಿಗಳನ್ನು ರೈತರಿಗೆ ಒದಗಿಸಿಕೊಡುವ ಒಂದು ಉತ್ತಮ ವೇದಿಕೆಯಾಗಿದೆ ಮತ್ತು ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಬೀಜಗಳು ಸಸಿಗಳು ಮತ್ತು ಪರಿಕರಗಳು ಒಂದೇ ಸೂರಿ ನಡಿ ಪ್ರದರ್ಶನ, ಮಾರಾಟ ಮತ್ತು ತಾಂತ್ರಿಕ ಮಾಹಿತಿಯನ್ನು ರೈತರಿಗೆ ಈ ಕೃಷಿ ಸಂತೆಯು ನೀಡುತ್ತದೆ ಎಂದು ವಿವರಿಸಿದರು.


ಈ ಕೃಷಿ ಸಂತೆಯಲ್ಲಿ ಕೃಷಿ ಪರಿಕರಗಳು, ಹಣ್ಣು ತರಕಾರಿ ಸಸಿ ಮತ್ತು ಕಸಿ ಗಿಡಗಳು, ಹೂವು ಮತ್ತು ಅಲಂಕಾರಿಕ ಗಿಡಗಳು, ಔಷಧೀಯ ಮತ್ತು ಸುಗಂಧ ಸಸ್ಯಗಳು, ತರಕಾರಿ ಬೀಜದ ಕಿಟ್, ಹೂ ಬೀಜದ ಕಿಟ್ಟುಗಳು, ಕೃಷಿ ಮತ್ತು ತೋಟಗಾರಿಕೆ ಉಪಕರಣಗಳು, ಜೈವಿಕ ಉತ್ಪನ್ನಗಳು ಮತ್ತು ಸಾವಯವ ಗೊಬ್ಬರ, ಮೌಲ್ಯವರ್ದಿತ ಹಾಗೂ ಸಂಸ್ಕರಿತ ಉತ್ಪನ್ನಗಳು ಮತ್ತು ವಿವಿಧ ರೀತಿಯ ಖಾದ್ಯ ಮತ್ತು ಆಹಾರ ಮಳಿಗೆಗಳು ಇವುಗಳು ಕೃಷಿ ಸಂತೆಯ ಆಕರ್ಷಣೆ ಆಗಿವೆ.
ಈ ಮೇಳದಲ್ಲಿ ವಿಶ್ವವಿದ್ಯಾಲಯದ ಗೌರವಾನ್ವಿತ ಆಡಳಿತ ಮಂಡಳಿ ಸದಸ್ಯರುಗಳು ಮತ್ತು ವಿಶ್ವವಿದ್ಯಾಲಯದ ಎಲ್ಲಾ ಎಲ್ಲಾ ಆಫೀಸರ್ಗಳು ಭಾಗವಹಿಸಿದ್ದರು.


ಈ ಕೃಷಿ ಸಂತೆಯಲ್ಲಿ ಸುಮಾರು 150 ಮಳಿಗೆಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.
ಈ ಕೃಷಿ ಸಂತೆಯ ಸಂದರ್ಭದಲ್ಲಿ ರೈತರು ಕೃಷಿ ವಿಜ್ಞಾನ ಕೇಂದ್ರದ ಪ್ರಾತ್ಯಕ್ಷಿಕ ತಾಕುಗಳಾದ ವಿವಿಧ ಬೆಳೆಗಳ ತಾಕುಗಳು, ಜೇನು ಪಾರ್ಕ್, ಸಮಗ್ರ ಕೃಷಿ ಪದ್ಧತಿ, ಮೀನುಗಾರಿಕೆ, ಕುರಿ ಸಾಗಾಣಿಕೆ ಮತ್ತು ಕೃಷಿ ಪ್ರವಾಸೋದ್ಯಮ ಕೃಷಿ ಯಾನಕ್ಕೆ ಭೇಟಿ ನೀಡಿ ಮಾಹಿತಿಯನ್ನು ರೈತರು ಪಡೆದುಕೊಂಡಿರುತ್ತಾರೆ. ಇ ಮೇಳದಲ್ಲಿ ಸಾವಿರಾರು ರೈತರು ಬಂದು ಉತ್ತಮ ಗುಣಮಟ್ಟದ ಸಸಿಗಳು ಮತ್ತು ಬೀಜಗಳನ್ನು ಖರೀದಿ ಮಾಡುತ್ತಿರುವುದು ಕಂಡುಬಂತು.

Leave a Reply

Your email address will not be published. Required fields are marked *