ಮಂಜುನಾಥ್ ಶೆಟ್ಟಿ…

ಹಿಂದೂ ಸಂಘಟನಾ ಮಹಾಮಂಡಳಿಯ (ಹಿಂದೂ ಮಹಾಸಭಾ ಅಂಗ ಸಂಸ್ಥೆ) ಸಭೆ ನಡೆಯಿತು.ಸಭೆಯಲ್ಲಿ, ನಿಧನರಾದ ಸಂಸ್ಥೆಯ ಅಧ್ಯಕ್ಷರಾಗಿದ್ದ ಎಂ. ಕೆ. ಸುರೇಶ್‌ಕುಮಾರ್ (ಚಾಲುಕ್ಯ ಸೂರಿ) ಅವರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸರಾಫ್ ಶ್ರೀಧರ್ ರಾವ್ ಹಾಗೂ ಕಾರ್‍ಯದರ್ಶಿಯಾಗಿ ಎ.ಎನ್. ಸತ್ಯನಾರಾಯಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಹಕಾರ್ಯದರ್ಶಿ ಎಸ್.ಎನ್. ಚನ್ನಬಸಪ್ಪ (ಚೆನ್ನಿ), ಖಜಾಂಚಿ ಎಸ್.ಎಂ. ದತ್ತಾತ್ರೇಯ ರಾವ್ ಹಾಗೂ ನಿರ್ದೇಶಕರಾದ ಸರಾಫ್ ಶ್ರೀಪಾದರಾವ್, ಹರಿಗೆ ಗೋಪಾಲಸ್ವಾಮಿ, ನಿರಂಜನ್, ರಾಜಶೇಖರ್ ಅಲಸೆ, ಚೇತನ್‌ಎಸ್. ಮತ್ತು ಚಂದ್ರಶೇಖರ್ (ರಾಜು) ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ನೇತೃತ್ವ ದಲ್ಲಿ೮೨ನೇ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಹಾಗೂ ಸಂಘಟನೆಯ ಕಾರ್ಯ ಚಟುವಟಿಕೆ ಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಸಂಚಾಲಕರಾದ ಎಸ್.ಎಂ. ದತ್ತಾತ್ರೇಯ ರಾವ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *