ಮಂಜುನಾಥ್ ಶೆಟ್ಟಿ…

ಮುಷ್ಠಿಯೊಳಗೆ ಪ್ರಪಂಚವೇ ಇದ್ದು ಅಂಕ ಗಳಿಕೆಯ ಶಿಕ್ಷಣದಲ್ಲಿ ಆತ್ಮ ವಿಶ್ವಾಸ ವೃದ್ಧಿಸುವ ಶಿಕ್ಷಣ ಸಿಗುತ್ತಿಲ್ಲೆ ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.

ಅವರು ನಗರದ ಕುವೆಂಪು ರಂಗಮಂದಿರದಲ್ಲಿ ಡಾ. ಶರತ್ ಮರಿಯಪ್ಪ ಫೌಂಡೇಷನ್, ಅಚೀವರ್ಸ್ ಟ್ರಸ್ಟ್ ಮತ್ತು ಕೋಚಿಂಗ್ ಸೆಂಟರ್ ಶಿವಮೊಗ್ಗ ಹಾಗೂ ಸ್ಪರ್ಧಾ ಅರಿವು ಅಕಾಡೆಮಿ ಬೆಂಗಳೂರು ಮತ್ತು ಸಾಧನಾ ಅಕಾಡೆಮಿ ಶಿಕಾರಿಪುರ ಇವರ ಸಹಯೋಗದಲ್ಲಿ ನಿಮ್ಮ ಕನಸು ನಮ್ಮ ಸಂಕಲ್ಪ ಉದ್ಯೋಗ ಪಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎರಡು ತಿಂಗಳ ಉಚಿತ ತರಬೇತಿ ಕಾರ್ಯಕ್ರಮ ತರಬೇತಿ ಆಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮುಟ್ಟಲು ಏಕಾಗ್ರತೆ ಬಹಳ ಮುಖ್ಯ. ಮೊಬೈಲ್ ಬಳಕೆ ಸಂವಹನಕ್ಕೆ ಮಾತ್ರ ಇರಬೇಕು. ರೀಲ್ಸ್ ಗಳಲ್ಲಿ ಪ್ರದರ್ಶನ ಮಾತ್ರ ಇರುತ್ತದೆ. ಮುಂದಿನ ಜೀವನಕ್ಕೆ ಬೇಕಾದ ಪ್ರಾಮಾಣಿಕ ಅಂಶಗಳ ಕೊರತೆ ಅದರಲ್ಲಿದೆ. ರೀಲ್ಸ್ ಗೆ ಬಲಿಯಾದರೆ ಮುಂದಿನ ಭವಿಷ್ಯ ಅಂಧಾಕಾರಕ್ಕೆ ಹೋಗುತ್ತದೆ ಎಂದರು.

ಫೌಂಡೇಷನ್‌ನ ಡಾ. ಶರತ್ ಮರಿಯಪ್ಪ ಮಾತನಾಡಿ, ಹಿಂದೆ ಭಾರತದಲ್ಲಿ ಕೇವಲ 10 ರಷ್ಟು ಮಾತ್ರ ವಿದ್ಯಾವಂತರಿದ್ದು, ಶೇ. 90 ರಷ್ಟು ಜನ ಕೃಷಿ ಮತ್ತು ಕೂಲಿ ಕಾರ್ಮಿಕರಾಗಿದ್ದರು. ಈಗ ಭಾರತದಲ್ಲಿ ವಿದ್ಯಾವಂತರ ಸಂಖ್ಯೆ ಶೇ. ೯೦ರಷ್ಟು ಇದೆ. ಅವರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ. ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಕರ್ನಾಟಕ ಸರ್ಕಾರ 60 ಸಾವಿರ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಒಳ್ಳೆಯ ಮನಸ್ಸಿನಿಂದ ಪ್ರಯತ್ನ ಪಟ್ಟರೆ ಫಲ ಸಿಗುತ್ತದೆ. ಇಚ್ಛಾಶಕ್ತಿ ಬೇಕು ಎಂದರು. ಪ್ರಮುಖರಾದ ಎನ್. ರಮೇಶ್, ಶಂಕರ್ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಅಭಿಷೇಕ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *