
ಮಂಜುನಾಥ್ ಶೆಟ್ಟಿ…
ಬೆಂಗಳೂರು : ನಮ್ಮ ಕರ್ನಾಟಕ ಸೇನೆಯ ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಎಂ ಪರಮೇಶ್ ರವರು ಆಯ್ಕೆಯಾಗಿದ್ದಾರೆ.
ರಾಜ್ಯಾಧ್ಯಕ್ಷರಾದ ಶ್ರೀ ಎಂ ಬಸವರಾಜ ಪಡುಕೋಟೆ ಯವರು ನೇಮಕಗೊಳಿಸಿ ಅದೇಶ ಹೊರಡಿಸಿರುತ್ತಾರೆ. ತದನಂತರ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರು ಎಂ ಬಸವರಾಜ್ ಪಡುಕೋಟೆಯವರು ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಿಗೆ ಕನ್ನಡದ ಶಾಲು ಧರಿಸಿ ಗೌರವಿಸಿ ಸನ್ಮಾನಿಸಿದರು.
ಸಂಘಟನೆಯನ್ನು ಶಿವಮೊಗ್ಗದ ಉಸ್ತುವಾರಿದ ಸುಜಯ್ ಪೂಜಾರಿ ಹಾಗೂ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಎಂ ಪರಮೇಶ್ವರ್ ರವರ ನೇತೃತ್ವದಲ್ಲಿ ಮುನ್ನಡೆಸಿಕೊಂಡು ಹೋಗುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ರಾಜ್ಯ ಉಪಾಧ್ಯಕ್ಷರಾದ ಅನಿಲ್ ಬಿ.ಶೆಟ್ಟಿ ಮಹಿಳಾ ರಾಜ್ಯ ಸುನಿತಾ ಗೌಡ ಮೊದಲಾದವರು ಉಪಸ್ಥಿತರಿದ್ದರು.