ಮಂಜುನಾಥ್ ಶೆಟ್ಟಿ…
ಜಿಲ್ಲಾಡಳಿತದಿಂದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿರುವ ವಿಶ್ವಕರ್ಮ ಜಯಂತಿಯ ಕಾರ್ಯಕ್ರಮವನ್ನು ಜಿಲ್ಲಾ ವಿಶ್ವಕರ್ಮ ಮಹಾಸಭಾ ಬಹಿಷ್ಕರಿಸಿದ್ದು, ಈ ಕಾರ್ಯಕ್ರಮಕ್ಕೆ ನಮ್ಮ ಸಮಾಜದ ಯಾವುದೇ ಸಂಘ ಸಂಸ್ಥೆಗಳ ಆಹ್ವಾನ ಪತ್ರಿಕೆಯಲ್ಲಿ ಪದಾಧಿಕಾರಿಗಳ ಹೆಸರು ಕೈಬಿಟ್ಟಿರುವುದನ್ನು ಜಿಲ್ಲಾ ವಿಶ್ವ ಕರ್ಮ ಮಹಾಸಭಾ ಖಂಡಿಸಿ ಜಿಲ್ಲಾಡಳಿತದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿತು.
ಪ್ರತಿ ವರ್ಷ ಜಿಲ್ಲಾಡಳಿತವು ಜಿಲ್ಲಾ ವಿಶ್ವಕರ್ಮ ಮಹಾಸಭಾ ಹಾಗೂ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಆಚರಿಸುತ್ತಿತ್ತು. ಆದರೆ, ಈ ಬಾರಿಯ ಕಾರ್ಯಕ್ರಮ ದಲ್ಲಿ ವಿಶ್ವಕರ್ಮ ಮಹಾಸಭಾ, ಸಮಾಜದ ಸಂಘ-ಸಂಸ್ಥೆಗಳು ಹಾಗೂ ಪದಾಧಿಕಾರಿಗಳ ಹೆಸರುಗಳನ್ನು ಆಹ್ವಾನ ಪತ್ರಿಕೆಯಲ್ಲಿ ಕೈಬಿಡುವ ಮೂಲಕ ನಿರ್ಲಕ್ಷಿಸಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಿಶ್ವಕರ್ಮ ಸಮಾಜದ ಪ್ರಮುಖರನ್ನು ಒಳಗೊಂಡು ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗು ತ್ತಿದೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಸಮಾಜವನ್ನು ಕಡೆಗಣಿಸಿ ಸರ್ಕಾರವೇ ಕಾರ್ಯಕ್ರಮ ನಡೆಸುತ್ತಿರುವುದು ಖಂಡನೀಯ ಎಂದು ಆರೋಪಿಸಲಾಗಿದೆ.
ಪ್ರತಿಭಟನೆಯಲ್ಲಿ ವಿಶ್ವಕರ್ಮ, ವಿಶ್ವ ಬ್ರಾಹ್ಮಣ ಸಮಾಜದ ಪ್ರಮುಖರಾದ ಸೋಮಾಚಾರ್, ಅನ್ನಪೂರ್ಣ ಕಾಳಾಚಾರ್, ಎಸ್. ರಮೇಶ್, ಟಿ.ಆರ್. ಸತ್ಯನಾರಾಯಣ ರಘುನಂದನ್ sp ಮುಂತಾದವರು ಉಪಸ್ಥಿತರಿದ್ದರು.