ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರು, ಮಾಜಿ ನಗರಸಭಾ ಅಧ್ಯಕ್ಷರು , ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿಯ ಉಪಾಧ್ಯಕ್ಷರು, ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಸಮಿತಿ ಅಧ್ಯಕ್ಷರು, ಹಿರಿಯ ಸಹಕಾರಿ ಎಂ ಕೆ ಸುರೇಶ್ ಕುಮಾರ್ (ಚಾಲುಕ್ಯ ಸೂರಿ) ಅವರು ದೈವಾಧೀನರಾದರು.

ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ
ಅವರ ಕುಟುಂಬ ವರ್ಗಕ್ಕೂ ಹಾಗೂ ಸ್ನೇಹಿತರಿಗೂ ಆ ಭಗವಂತ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ, ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಕೆ ರಂಗನಾಥ್, ಉಪಾಧ್ಯಕ್ಷರಾದ, ಸಿ ಹೊನ್ನಪ್ಪ, ಖಜಾಂಚಿ ಘನಶಾಮ್, ಹಿರಿಯ ನಿರ್ದೇಶಕರುಗಳಾದ ಉಮಾಶಂಕರ ಉಪಾಧ್ಯ, ಎಸ್ ಪಿ ಶೇಷಾದ್ರಿ, ಜಿ ಚಂದ್ರಶೇಖರ್, ಜಿ ರಾಜು, ಎಂ ರಾಕೇಶ್,ಎಸ್ ಎನ್ ಮಹೇಶ್, ಬಿ ಲೋಕೇಶ್, ಪ್ರೇಮಾ ಚಂದ್ರಶೇಖರ್, ಹೌಸಿಂಗ್ ಸೊಸೈಟಿ ನಿರ್ದೇಶಕರಾದ ಎಂ ಆರ್ ಪ್ರಕಾಶ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಮನೋಜ್ ಕುಮಾರ್, ಬ್ಯಾಂಕಿನ ಸಿಬ್ಬಂದಿ ವರ್ಗದವರು, ಪಿಗ್ಮಿ ಸಂಗ್ರಹಕರು, ಶೇರುದಾರರು, ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *