ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಉಪವಿಭಾಗದ ಶಿರಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಶಿಕಾರಿಪುರ ಶಿರಾಳಕೊಪ್ಪ ಮುಖ್ಯರಸ್ತೆಯಲ್ಲಿ ಶಿಕಾರಿಪುರ ಟೌನ್ ವಾಸಿ ಮಂಜುನಾಥ ಬಿನ್ ರಾಜಪ್ಪ ಈತನು ಫ್ಯಾನ್ಸಿ ಐಟಂ ವ್ಯಾಪಾರವನ್ನು ಮಾಡುತ್ತಾ ಬರುವಾಗ ಊಟಕ್ಕೆಂದು ಶಿರಳಕೊಪ್ಪ ಕ್ಕೆ ದಿನಾಂಕ 21-08-2021 ರಂದು ಮಧ್ಯಾಹ್ನ 1:30 ಗಂಟೆಯ ಸುಮಾರಿಗೆ ಹೊರಟಾಗ ಮೇಲ್ಕಂಡ ಸ್ಥಳದ ರಸ್ತೆಬದಿಯಲ್ಲಿ ತನ್ನ ಬೈಕನ್ನು ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಯಾರು ನಾಲ್ಕು ಜನ ಅಪರಿಚಿತರು ನಂಬರ್ ಗಳಿಲ್ಲದ ಎರಡು ಬೈಕಿನಲ್ಲಿ ಬಂದು ಪಿರ್ಯಾದಿಯನ್ನು ಹಿಡಿದುಕೊಂಡು ಅವರ ಕೊರಳಿನಲ್ಲಿದ್ದ ರೋಲ್ಡ್ ಗೋಲ್ಡ್ ಚೈನ್ ಸರ ಹಣ ಮತ್ತು ಕೈಯಲ್ಲಿದ್ದ ಒಂದು ಮೊಬೈಲ್ ಫೋನನ್ನು ಕಿತ್ತುಕೊಂಡು ಹೋಗಿದ್ದರಿಂದ ಶಿರಳಕೊಪ್ಪ ಪೊಲೀಸ್ ಠಾಣೆಯಲ್ಲಿ ಸಿಆರ್ 146/2021 ಕಲಾಂ392 ಸಹಿತ 34 ಐ.ಪಿ.ಸಿ ರಿತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ
ನಂತರ ಸದರಿ ಆರೋಪಿತರ ನಿಮಿತ್ಯವಾಗಿ ಮಾನ್ಯ ಎಸ್ಪಿ ಸಾಹೇಬರು ಶಿವಮೊಗ್ಗ ಜಿಲ್ಲೆ ಮಾನ್ಯ ಎಸ್ಎಸ್ಪಿ ಸಾಹೇಬರು ಶಿವಮೊಗ್ಗ ಮತ್ತು ಮಾನ್ಯ ಡಿಎಸ್ಪಿ ಸಾಹೇಬರು ಶಿಕಾರಿಪುರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಸಿಪಿಐ ಶಿಕಾರಿಪುರ ವೃತ್ತ ಪಿಎಸ್ಐ ಶಿರಳಕೊಪ್ಪ ಠಾಣೆ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿದ್ದು ಖಚಿತ ಮಾಹಿತಿ ಮೇರೆಗೆ ಎರಡು ಆರೋಪಿತರನ್ನು ಮತ್ತು ಕಾನೂನು ಸಂಘರ್ಷಕ್ಕೆ ಬಾಲಕನನ್ನು ವಶಕ್ಕೆ ಪಡೆದು ಅವರಿಂದ ತನಿಖೆ ಕೈಗೊಂಡು ಸದರಿ ಪ್ರಕರಣಗಳ ಅಲ್ಲದೆ ಈ ಹಿಂದೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸ್ ಠಾಣೆ ಶಿಕಾರಿಪುರ ಟೌನ್ ಠಾಣೆ ದೊಡ್ಡಪೇಟೆ ಠಾಣೆ ಕುಂಸಿ ಠಾಣೆ ಹಾಗೂ ಹಾವೇರಿ ಜಿಲ್ಲೆ ರಾಣೆಬೆನ್ನೂರು ಟೌನ್ ಪೊಲೀಸ್ ಠಾಣಾ ವ್ಯಕ್ತಿಗಳಲ್ಲಿ ಮನೆಗಳ್ಳತನ ಮತ್ತು ವಾಹನ ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು ಕಳ್ಳತನ ಮಾಡಿದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದು ಅವುಗಳ ವಿವರ ಹಾಗೂ ಆಪಾದಿತರ ವಿವರ ಈ ಕೆಳಕಂಡಂತೆ ಇರುತ್ತದೆ.

ಸದರಿಯವರಿಂದ ಪತ್ತೆಯಾದ ಕಳ್ಳತನ ಪ್ರಕರಣಗಳ ವಿವರಗಳು:-

  • ಶಿರಾಳಕೊಪ್ಪ ಠಾಣೆ : ಪ್ರಕರಣ 4 , ಬಂಗಾರ 539 ಗ್ರಾಂ , 9 ಕೆ .ಜಿ 900 ಗ್ರಾಂ , ವಸ್ತುಗಳು : 1ಮೊಬೈಲ್ ಫೋನ್ 1ಬೈಕ್ 1ಕಾರು 1ಕೋಟಿ ನಗದು ಹಣ 1.30.000/ , ಅಂದಾಜು ಬೆಲೆ 35,48,500.
  • ಶಿಕಾರಿಪುರ ಟೌನ್: ಪ್ರಕರಣಗಳು 02, ಬಂಗಾರ 22ಗ್ರಾಂ , ಬೆಳ್ಳಿ 62ಗ್ರಾಂ , ಅಂದಾಜು ಬೆಲೆ 95.400.
  • ದೊಡ್ಡಪೇಟೆ: ಪ್ರಕರಣ 1 , ವಸ್ತು 1ಬೈಕ್ , ಅಂದಾಜು ಬೆಲೆ 25.000.
  • ಕುಂಶಿ : ಪ್ರಕರಣ 02, ವಸ್ತು 2ಬೈಕ್ , 65.000,
  • ರಾಣೇಬೆನ್ನೂರ : ಪ್ರಕರಣ 01, ವಸ್ತು 1 ಬೈಕ್ , ಅಂದಾಜು ಬೆಲೆ 35.000.
  • ಒಟ್ಟು : ಪ್ರಕರಣಗಳು 10, ವಶಪಡಿಸಿಕೊಂಡ ಬಂಗಾರ 561ಗ್ರಾಂ , ವಶಪಡಿಸಿಕೊಂಡ ಬೆಳ್ಳಿ 9ಕೆ ಜಿ 962ಗ್ರಾಂ , ವಶಪಡಿಸಿಕೊಂಡ ಇತರೆ ವಸ್ತುಗಳು :6ಬೈಕ್ 1ಕಾರು 1ಮೊಬೈಲ್ ಫೋನ್ ಮತ್ತು ನಗದು ಹಣ , ಅಂದಾಜು ಬೆಲೆ 37.68.900/-

ಮೇಲ್ಕಂಡ 2ಆರೋಪಿತರು ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಂದ ಶಿವಮೊಗ್ಗ ಜಿಲ್ಲೆಯ ಶಿರಳಕೊಪ್ಪ ಶಿಕಾರಿಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ ಮನೆಗಳ್ಳತನ ವಾಹನ ಮತ್ತು ದೊಡ್ಡಪೇಟೆ ಕುಂಸಿ ಮತ್ತು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಕಳ್ಳತನ ಮಾಡಿದ ಬಗ್ಗೆ ಒಟ್ಟು 10 ಪ್ರಕರಣಗಳನ್ನು ಪತ್ತೆಮಾಡಿದ್ದು ಒಟ್ಟು 37.68.900( ಮೂವತ್ತೇಳು ಲಕ್ಷದ ಅರವತ್ತೆಂಟು ಸಾವಿರದ ಒಂಬೈನೂರು) ರೂಪಾಯಿ ಮೌಲ್ಯದ ಬಂಗಾರ ಬೆಳ್ಳಿ ಆಭರಣಗಳು ಬೈಕುಗಳು ಒಂದು ಮೊಬೈಲ್ ಫೋನ್ ಹಣ ಮತ್ತು ಕೃತ್ಯಕ್ಕೆ ಬಳಸಿದ ಒಂದು ಕಾರು ಮತ್ತು ಸ್ಕೂಟಿ ಅಮಾನತ್ತು ಪಡಿಸಿಕೊಂಡಿರುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153