ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಜಯಕರ್ನಾಟಕ ಸಂಘಟನೆಯ ಮಹಿಳಾ ಘಟ್ಟ ಅತ್ಯಂತ ಆಕ್ರೋಶದಿಂದ ಆಗ್ರಹಿಸುತ್ತದೆ.ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಸರ್ಕಾರ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಆದಷ್ಟು ಬೇಗ ದುರಳರನ್ನು ಪತ್ತೆಹಚ್ಚಬೇಕು ಎಂದು ನಮ್ಮ ಸಂಘಟನೆಯ ಅಗ್ರಹಿಸುತ್ತದೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ರಾಜಕಾರಣ ಮಾಡುವ ಹೊತ್ತು ಇದಲ್ಲ ಗೃಹಸಚಿವರ ವಿವಾದಿತ ಹೇಳಿಕೆಗೆ ಮುಖ್ಯಮಂತ್ರಿಗಳು ಸರಿಯಾದ ಉತ್ತರವನ್ನೇ ಕೊಟ್ಟಿದ್ದಾರೆ. ಅದೆಲ್ಲ ಬಿಟ್ಟು ಕಾಮುಕರ ಪತ್ತೆಗಾಗಿ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಯಾವ ಮಹಿಳೆಗೂ ಇಂಥ ಸ್ಥಿತಿ ಬರಬಾರದು.

ಗಾಂಧೀಜಿಯವರು ಹೇಳಿದಂತೆ ಅರ್ಧರಾತ್ರಿಯಲ್ಲಿ ಹೆಣ್ಣು ಮಕ್ಕಳು ಓಡಾಡುವ ಕಾಲ ಬಂದಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಸಿಗುತ್ತದೆ. ಸರ್ಕಾರ ಸಂತ್ರಸ್ತೆಯ ಕುಟುಂಬಕ್ಕೆ ಸಾಂತ್ವಾನ ಹೇಳಬೇಕು ಸಮಯ ವ್ಯರ್ಥ ಮಾಡದೆ ಪೊಲೀಸರು ಆರೋಪಿಗಳ ಪತ್ತೆ ಹಚ್ಚಬೇಕು. ದುಷ್ಕರ್ಮಿಗಳ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಇಂತಹ ಕೃತ್ಯಗಳು ಮತ್ತೆ ಮತ್ತೆ ಮರುಕಳಿಸಬಾರದು ಎಂದು ಜಯ ಕರ್ನಾಟಕ ಮಹಿಳಾ ಘಟ ಪ್ರತಿಭಟನೆಯ ಮೂಲಕ ಅಗ್ರಹಿಸುತ್ತದೆ. ಅತ್ಯಾಚಾರಿಗಳು ಸಿಕ್ಕಿ ಬಿದ್ದಿದ್ದರೆ ಎಂದು ತಿಳಿದುಬಂದಿದೆ. ಇದು ಸ್ವಾಗರ್ತಹ ಇವರಿಗೆ ಶೀಘ್ರ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತದೆ. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು ಸುರೇಶ್ ಶೆಟ್ಟಿ, ತಬಸಮ್ ನಗರ ಮಹಿಳಾ ಅಧ್ಯಕ್ಷರು,ಪ್ರೇಮ ಎನ್ ಶೆಟ್ಟಿ , ಕೌಸರ್ ಬಾನು, ಪಂಕಜ, ಮೋಹನ್ ದೇವರಾಜ್ , ನಾಸೀಮಾ ಮಹಿಳಾ ಅಧ್ಯಕ್ಷರು ,ದಿನೇಶ್ ,ಡಾ॥ರೇಖಾ ಹಾಜರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153