ಶಿವಮೊಗ್ಗ: ವಿನೋಬನಗರದ ಶಿವಾಲಯದ ಸಭಾಂಗಣದಲ್ಲಿ ಇಂದು ಯೋಗ ಶಿಕ್ಷಣ ಸಮಿತಿ ಮತ್ತು ಶಿವಾಲಯದ ಯೋಗ ಕೇಂದ್ರದ ವತಿಯಿಂದ ಅಜಿತ್ ಕುಮಾರ್ ಸ್ಮರಣಾರ್ಥ ಸೇವಾ ದಿನಾಚರಣೆ ಅಂಗವಾಗಿ ನೇತ್ರದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮನೋಹರ್ ನೇತ್ರದಾನದ ಬಗ್ಗೆ ಅರಿವು ಮೂಡಿಸಿದರು. ಎರಡು ಕಣ್ಣುಗಳ ದಾನದಿಂದ ಸುಮಾರು 4 ಜನರಿಗೆ ಅನುಕೂಲವಾಗುತ್ತದೆ. ಹೆಚ್ಐವಿ ಮತ್ತು ಸೋಂಕಿತರನ್ನು ಬಿಟ್ಟು ಉಳಿದೆಲ್ಲರೂ ಕೂಡ ಕಣ್ಣು ದಾನ ಮಾಡಲು ಅರ್ಹರಾಗಿರುತ್ತಾರೆ ಎಂದರು.ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ನೇತ್ರ ಭಂಡಾರಕ್ಕೆ ಮಾಹಿತಿ ನೀಡಿದಲ್ಲಿ ಅದನ್ನು ಸಂಗ್ರಹಿಸಿ ದೃಷ್ಠಿ ಹೀನರಿಗೆ ನೆರವು ನೀಡಬಹುದು.
ನೇತ್ರದಾನ ಶ್ರೇಷ್ಟ ದಾನವಾಗಿದ್ದು, ಎಲ್ಲರೂ ದಾನಪತ್ರ ಪಡೆದು ನೋಂದಾಯಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಭಾ.ಮ. ಶ್ರೀಕಂಠ, ಡಾ.ಎಲ್.ಎನ್. ನಾಯಕ್, ಯೋಗ ತರಬೇತುದಾರರಾದ ಶ್ರೀನಿವಾಸಮೂರ್ತಿ, ಅರವಿಂದ್, ಡಾ. ಸಂಜಯ್, ಮಂಜುನಾಥ್, ರೋಟರಿ ಬ್ಲಡ್ ಬ್ಯಾಂಕ್ ಅಧ್ಯಕ್ಷ ಅರಕೆರೆ ಮಂಜಪ್ಪ ಮೊದಲಾದವರಿದ್ದರು.ಈ ಸಂದರ್ಭದಲ್ಲಿ ಯೋಗಪಟು ಮತ್ತು ಸಂಗೀತ ವಿದ್ವಾನ್ ಉಮಾ ಅವರನ್ನು ಸನ್ಮಾನಿಸಲಾಯಿತು. ಯೋಗಕೇಂದ್ರದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.