Month: May 2022

ಶ್ರೀ ಚೌಕಿ ಬಸವೇಶ್ವರ ದೇವಾಲಯನ್ನು ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ…

ಶಿಕಾರಿಪುರ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿಶ್ರೀ ಚೌಕಿ ಬಸವೇಶ್ವರ ದೇವರ ಮೂರ್ತಿಯ ಪಾಣ ಪ್ರತಿಷ್ಠಾಪನೆ & ಗೋಪುರದ ಕಳಸಾರೋಹಣ ಹಾಗೂ ನೂತನವಾಗಿ ನಿರ್ಮಿಸಿರುವ ದೇವಸ್ಥಾನದ ಉದ್ಘಾಟನೆಯನ್ನು ಸಂಸದರಾದ ಬಿ. ವೈ. ರಾಘವೇಂದ್ರ ಅವರು ಉದ್ಘಾಟಿಸಿದರು. ದಿವ್ಯಸಾನಿಧ್ಯವನ್ನು ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ತಪೋಕ್ಷೇತ್ರ…

ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ ರವರಿಂದ ಡಾ. ಬಿ.ಆರ್. ಅಂಬೇಡ್ಕರ್ ಕಾರ್ಯಕ್ರಮಕ್ಕೆ ಚಾಲನೆ…

ಇಂದು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ ಅಶೋಕ ನಾಯ್ಕ ರವರು ಬೇಡರಹೊಸಹಳ್ಳಿ ಗ್ರಾಮದಲ್ಲಿ ನಡೆದ ಡಾ.ಬಿ.ಆರ್ ಅಂಬೇಡ್ಕರ್ ರವರ 131ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು…

ಸೇವಾ ಕ್ಷೇತ್ರದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಮುಂಚೂಣಿ- ಎಸ್. ಪಿ. ದಿನೇಶ್…

ಶಿವಮೊಗ್ಗ: ಜಗತ್ತಿನಲ್ಲಿ ಮನುಕುಲದ ಸೇವೆಯಲ್ಲಿ ಹಾಗೂ ಸೇವಾ ಚಟುವಟಿಕೆ ಕ್ಷೇತ್ರದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಮುಂಚೂಣಿಯಲ್ಲಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಶಿವಮೊಗ್ಗ ಅಧ್ಯಕ್ಷ ಎಸ್.ಪಿ.ದಿನೇಶ್ ಹೇಳಿದರು. ನಗರದ ಜೆಪಿಎನ್ ರಸ್ತೆಯಲ್ಲಿ ಇರುವ ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿಯಲ್ಲಿ “ವಿಶ್ವ ರೆಡ್‌ಕ್ರಾಸ್ ದಿನಾಚರಣೆ”…

ಮಹಿಳೆಯರ ಉದ್ಯಮ ಮಾರುಕಟ್ಟೆ ಸೌಲಭ್ಯ ಒದಗಿಸಲು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸೋಣ-ಎಸ್. ದತ್ತಾತ್ರಿ…

ಹೆಣ್ಣು ಮಹಿಳೆಯರ ಉದ್ಯಮಕ್ಕೆ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಿ ಮಹಿಳೆಯರನ್ನು ಸ್ವಾವಲಂಬಿಯಾಗಿಸೋಣ. ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಸೌಲಭ್ಯ ಸಿಗದಿರುವ ಕಾರಣ ಮಹಿಳೆಯರು ತಮ್ಮ ಉದ್ಯೋಗದಲ್ಲಿ ಪ್ರಗತಿ ಕಾಣುತ್ತಿಲ್ಲ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮ ನಿಯಮಿತದ ಉಪಾಧ್ಯಕ್ಷರಾದ ಎಸ್ ದತ್ತಾತ್ರಿ…

ಶಿವಮೊಗ್ಗದಲ್ಲಿ ಅರಣ್ಯ ಅಧಿಕಾರಿಯೊಬ್ಬರಿಂದ ಇಲಾಖಾ ವಾಹನ ದುರ್ಬಳಕೆ…

ಸರ್ಕಾರವು ಸರ್ಕಾರಿ ಅಧಿಕಾರಿಗಳಿಗೆ ಅನುಕೂಲವಾಗಲೆಂದು ಸರ್ಕಾರದ ವಾಹನಗಳನ್ನು ನೀಡಿರುತ್ತದೆ. ಸರಕಾರಕ್ಕೆ ಇಂತಹ ವಾಹನಗಳ ಡೀಸೆಲ್ ಹಾಗೂ ಮೆಂಟೆನೆನ್ಸ್ ವೆಚ್ಚವನ್ನು ಭರಿಸಲು ಬಹುಪಾಲು ಹಣ ವ್ಯಯವಾಗುತ್ತದೆ. ಏತನ್ಮಧ್ಯೆ ಕೆಲವು ಅಧಿಕಾರಿಗಳು ತಮ್ಮ ಸರ್ಕಾರಿ ವಾಹನವನ್ನು ಖಾಸಗಿ ಕೆಲಸಗಳಿಗೆ ಬಳಸುವ ಚಾಳಿಯನ್ನು ಇನ್ನೂ ಬಿಟ್ಟಿಲ್ಲ.…

ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೈಕಮಾಂಡ್ ಸೂಕ್ತ ಕ್ರಮ ಜರುಗಿಸುತ್ತಾರೆ-ಬಿ. ವೈ. ವಿಜಯೇಂದ್ರ…

ಶಿವಮೊಗ್ಗ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಪಕ್ಷ ಸೂಕ್ತ ಸಮಯದಲ್ಲಿ ಕ್ರಮ ಜರುಗಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ 2500 ಕೋಟಿ ರೂ. ನೀಡುವಂತೆ ಕೇಂದ್ರದ…

ಅಲ್ಕೊಳ ಹತ್ತಿರ ಬೈಕ್ ಸ್ಕಿಡ್ ಆಗಿ ಇಬ್ಬರು ಸ್ಥಳದಲ್ಲೇ ಸಾವು…

BREAKING NEWS… ಶಿವಮೊಗ್ಗದ ಅಲ್ಕೊಳ ಸರ್ಕಲ್ ಹತ್ತಿರ ಬೈಕ್ ಅಪಘಾತ. ಸ್ಥಳದಲ್ಲಿ ಇಬ್ಬರು ಸಾವು. ದ್ವಿಚಕ್ರ ವಾಹನದಲ್ಲಿ ಇಬ್ಬರು ಯುವಕರು ಬೈಕಿನಲ್ಲಿ ತೆರಳುತ್ತಿದ್ದ. ಬೈಕ್ ಸ್ಕಿಡ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಇಬ್ಬರು ಇಬ್ಬರು ಮೃತಪಟ್ಟಿದ್ದಾರೆ. ಹೆಲ್ಮೆಟ್ ಧರಿಸಿಲ್ಲ…

ಭದ್ರಾವತಿಯ ಗೋಣಿಬೀಡುವಿನಲ್ಲಿರುವ ಶೀಲ ಸಂಪಾದನ ಮಠದ ಆಶ್ರಯದಲ್ಲಿ ನಡೆದ ಮಹಿಳಾ ಸಮಾವೇಶ…

ಭದ್ರಾವತಿಯ ಗೋಣಿಬೀಡುವಿನಲ್ಲಿರುವ ಶೀಲಾ ಸಂಪಾದನಾ ಮಠದ ಆವರಣದಲ್ಲಿ ಶೀಲ ಸಂಪಾದನಾಮಠ ಪೂಜ್ಯರು ಮಹಾತಪಸ್ವಿಗಳೂ ಆದ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿಯವರ ಆಶೀರ್ವಾದದೊಂದಿಗೆ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಮತ್ತು ಭದ್ರಾ ಒಕ್ಕಲಿಗ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಭಾರತಿ ರಾಮಕೃಷ್ಣಅವರ ಸಾರಥ್ಯದಲ್ಲಿ ಮಹಿಳಾ…

ಚಾರಣದಿಂದ ದೇಶದ ಪ್ರಾಕೃತಿಕ ಸೊಬಗಿನ ಪರಿಚಯ-ಎನ್. ಗೋಪಿನಾಥ್…

ಶಿವಮೊಗ್ಗ: ಚಾರಣ ಮಾಡುವುದರಿಂದ ದೇಶದ ಪ್ರಾಕೃತಿಕ ಸೊಬಗಿನ ಪರಿಚಯ ಆಗುವುದರ ಜತೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಜೀವನಶೈಲಿ ಹಾಗೂ ಸಾಂಸ್ಕೃತಿಕ ಶ್ರೇಷ್ಠತೆಯ ಪರಿಚಯವಾಗುತ್ತದೆ ಎಂದು ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು. ಶಿವಮೊಗ್ಗ ನಗರದಲ್ಲಿ ವಾಸವಿ ಟ್ರಸ್ಟ್, ಯೂತ್ ಹಾಸ್ಟೆಲ್ ಅಸೋಸಿಯೇಷನ್…

ನಗರದ ಸೂಳೇ ಬಯಲಿನಲ್ಲಿ ಕಾರಿನ ಗಾಜು ಒಡೆದ ದುಷ್ಕರ್ಮಿಗಳು…

BREAKING NEWS… ಶಿವಮೊಗ್ಗ ನಗರದ ಸೂಳೇ ಬಯಲಿನ ಬಳಿ ಕಾರಿನ ಗಾಜು ಒಡೆದ ದುಷ್ಕರ್ಮಿಗಳು.ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳ ಲಕ್ಷ್ಮೀಪ್ರಸಾದ್ ಭೇಟಿ. ಮಾರುತಿ ಶಿಫ್ಟ್ ಕಾರಿನಲ್ಲಿ ಇಬ್ಬರು ಮತ್ತೂರಿನ ಕಡೆ ಹೋಗುವಾಗ ಹಿಂದಿನಿಂದ ಬೈಕಿನಲ್ಲಿ ಬಂದು ಹಿಂಬದಿಯ ಕಾರಿನ ಗ್ಲಾಸನ್ನು ರಾಡಿನಿಂದ ಹೊಡೆದು…