ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ ಟಿ ರಸ್ತೆಯ ನಮೋ ಶಂಕರ್ ಲೇಔಟ್ ನ ಖಾಲೀ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ ದೊಡ್ಡಪೇಟೆ, ಪೊಲೀಸ್ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದಾರೆ.

ನಂತರ ಆರೋಪಿತರಾದ 1) ಮಹಮ್ಮದ್ ರಿಜ್ವಾನ್, 25 ವರ್ಷ, ಆರ್.ಎಂ.ಎಲ್ ನಗರ ಶಿವಮೊಗ್ಗ ಮತ್ತು 2) ರೆಹಮಾನ್, 19 ವರ್ಷ, ಅಶೋಕನಗರ ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 92,000/- ರೂ ಗಳ ಒಟ್ಟು 1 ಕೆಜಿ, 800 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0272/2022 ಕಲಂ 8(c),20(b),20(ii)(B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ವರದಿ ಮಂಜುನಾಥ್ ಶೆಟ್ಟಿ…