ಶಿವಮೊಗ್ಗ ಟೌನ್ ಬಾಪೂಜಿ ನಗರದ ವಾಸಿ ಶ್ರೀ ದಸ್ತಗೀರ್ ಖಾನ್ @ ಬಾಬು, 47 ವರ್ಷ ರವರ ಮನೆಯ ಬೀಗ ಮುರಿದು ಮನೆಯ ಒಳಗೆ ಇದ್ದ ಬಂಗಾರದ ಒಡವೆಗಳು ಮತ್ತು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0098/2022 ಕಲಂ 457, 380, ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮಾರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರ ಮಾರ್ಗದರ್ಶನದಲ್ಲಿ, ಶ್ರೀ ಬಾಬು ಆಂಜನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀ. ಎಮ್. ಎಸ್ ದೀಪಕ್, ಪಿಐ ಕೋಟೆ ಪೊಲೀಸ್ ಠಾಣೆ ಪಿ.ಎಸ್.ಐ ರವರಾದ ಶ್ರೀ ಕುಮಾರ್, ಶ್ರೀ ಸಿ.ಅರ್.ಕೊಪ್ಪದ್ ಹಾಗೂ ಸಿಬ್ಬಂದಿಯವರಾದ ಎಎಸ್ಐ ಟಿ. ಶ್ರೀಹರ್ಷ, ಹೆಚ್.ಸಿ. ರವರಾದ ಅಣ್ಣಪ್ಪ, ನಾಗರಾಜ್, ಸಿ.ಪಿ.ಸಿ ರವರಾದ ಪ್ರಕಾಶ್, ಗೊರವರ ಅಂಜಿನಪ್ಪ, ಕಿಶೋರ, ಮಪಿಸಿ ಜಯಶ್ರೀ .ಎಲ್ ರವರನ್ನು ಒಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿತರಾದ 1) ಮೊಹಮ್ಮದ್ ರಫೀಕ್ @ ಕಾಣ, 25 ವರ್ಷ, ಚಿಕ್ಕಲ್, ಶಿವಮೊಗ್ಗ ಮತ್ತು 2) ಅತಾವುಲ್ಲಾ, 24 ವರ್ಷ, ಬಾಪೂಜಿನಗರ, ಶಿವಮೊಗ್ಗ ಇವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 7,62,000/- ರೂಗಳ 127 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ವರದಿ ಪ್ರಜಾ ಶಕ್ತಿ