ಮೈಸೂರಿನಲ್ಲಿ ಭಾನುವಾರ ನಡೆದ ಮರ್ಲಿನ್ ಆಕ್ವಟಿಕ್ ಸೆಂಟರ್ ನಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಶಿವಮೊಗ್ಗ ಕ್ರೀಡಾ ಸಂಕೀರ್ಣ ದ ಈಜುಪಟುಗಳು 4 ಚಿನ್ನ, 9 ಬೆಳ್ಳಿ, 6 ಕಂಚಿನ ಪದಕಗಳನ್ನು ಪಡೆದು ಒಟ್ಟಾಗಿ 19 ಪದಕ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

19 ಪದಕಗಳನ್ನು ಪಡೆಯಲು ಕಾರಣಕರ್ತರಾದ (ಕೋಚ್) ಸಂಗಮೇಶ್ ಪಾರಶೆಟ್ಟಿ, ರಮೇಶ್ ಪಾರಶೆಟ್ಟಿ ಹಾಗೂ ಸಚಿನ್ ರವರಿಗೆ ಧನ್ಯವಾದಗಳು ತಿಳಿಸಿದ್ದಾರೆ.ಈಜು ಪಟುಗಳು ಪ್ರತಿ ದಿನ ಶಿವಮೊಗ್ಗ ನಗರದ ಗೋಪಾಲ ಗೌಡ ಬಡಾವಣೆಯಲ್ಲಿರುವ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವರದಿ ಪ್ರಜಾ ಶಕ್ತಿ