ಲಯನ್ಸ್ ಕ್ಲಬ್ ಶಿವಮೊಗ್ಗ ಈ ಸಂಸ್ಥೆಯ ಅಧ್ಯಕ್ಷರಾಗಿ ಎರಡನೇ ಅವಧಿಗೆ ಶ್ರೀ ರಾಜ ಮೋಹನ್ ಹೆಗ್ಡೆ ರವರು ಆಯ್ಕೆಯಾಗಿದ್ದಾರೆ. ಇನ್ನು ಕಾರ್ಯದರ್ಶಿಯಾಗಿ ಜೋಸೆಫ್ ಖಜಾಂಚಿಯಾಗಿ ರತ್ನಾಕರ್ ರವರು ಆಯ್ಕೆಯಾಗಿದ್ದಾರೆ.ಬಂಟರ ಯಾನೆ ನಾಡವರ ಸಂಘದ ವತಿಯಿಂದ ಶ್ರೀ ರಾಜ್ ಮೋಹನ್ ಹೆಗ್ಡೆ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಹೆಗ್ಡೆಯವರ ಅವಧಿಯಲ್ಲಿ ಲಯನ್ಸ್ ಕ್ಲಬ್, ಶಿವಮೊಗ್ಗ ಇನ್ನೂ ಹಲವಾರು ಯೋಜನೆಗಳನ್ನು ಕೈಗೊಂಡು ರಾಜ್ಯದಲ್ಲಿಯೇ ಪ್ರತಿಷ್ಠಿತ ಸಂಘವಾಗಿ ಗುರುತುಸಿಕೊಳ್ಳುವಂತಾಗಲಿ ಎನ್ನುವ ಶುಭ ಹಾರೈಕೆ ಸತೀಶ್ ಕುಮಾರ್ ಶೆಟ್ಟಿ ರವರು ಶುಭ ಹಾರೈಸಿದರು.

ವರದಿ ಪ್ರಜಾ ಶಕ್ತಿ