ಸೂಡಾ ಕಛೇರಿ ಪಕ್ಕದ ಶೆಡ್ ತೆರುವಿಗೆ ದಿನಾಂಕ: 07.08.2024 ಸೂಡಾ ಆಯುಕ್ತರ ಪತ್ರ ನೀಡಿದರು ಸಹ ಕ್ರಮ ಆಗದೆ ಇರುವುದರಿಂದ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ 28ರಂದು ಅಹೋರಾತ್ರಿ ಹೋರಾಟ ಧರಣಿ ನಡೆಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿ.07.08.2024 ನೇ ತಾರೀಕಿನ ಪತ್ರದಲ್ಲಿ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ಆಯುಕ್ತರು ಈ ರಸ್ತೆಯ ಜಾಗದ ಜಂಟಿ ಸರ್ವೆಗೆ ವಿನಂತಿಸಿದ್ದಾರೆ. ಈ ಜಾಗ ಶಿವಮೊಗ್ಗ ನಗರ ಮಹಾಯೋಜನೆ 2030, 2012 ಮತ್ತು ಅದಕ್ಕಿಂತ ಪೂರ್ವದ ಎಲ್ಲಾ ನಕ್ಷೆಗಳಲ್ಲಿ ರಸ್ತೆ ಎಂದು ಸೂಚಿಸಿಲ್ಪಟ್ಟಿದೆ. ಆದ್ದರಿಂದ ಇದು ಸೂಡಾದವರ ಜಾಗ ಅಥವಾ ಪಾಲಿಕೆ ರಸ್ತೆ ಇವೆರಡರಲ್ಲಿ ಯಾವುದಾದರೂ ಸರಿ ಈ ಜಾಗ ರಸ್ತೆ ಆಗಿಯೇ ಇರಬೇಕು. ಹಾಗಾಗಿ ಈ ಜಾಗ ಸರ್ವೆ ಆದರೂ ಸರ್ವೆ ಆಗದಿದ್ದರೂ ಇದು ರಸ್ತೆ ಆಗಿಯೇ ಇರಬೇಕು ಎಂದರು.
ಇದುವರೆವಿಗೂ ಸೂಡಾ ಆಯುಕ್ತರು ಈ ಜಾಗ ಮಹಾಯೋಜನೆ ನಿಯಮದ ಪ್ರಕಾರ ಈ ರಸ್ತೆ ಅನ್ಯ ಉದ್ದೇಶಕ್ಕೆ ಬದಲಾವಣೆ ಆದ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ. ಈ ಶೆಡ್ ನಿರ್ಮಾಣಕ್ಕೆ ಪಾಲಕೆಯಿಂದ ಯಾವುದೇ ಲೈಸೆನ್ಸ್ ಪಡೆದಿಲ್ಲ ಎಂದರು.
ಈ ಕಾರಣಗಳಿಂದ
ಇದೂಂದು ಕಾನೂನು ಬಾಹಿರ ಹಾಗು ಅನದಿಕೃತ ರಸ್ತೆಯ ಮೇಲೆ ಮಾಡಿರುವ ನಿರ್ಮಾಣ (ಶೆಡ್) ತಕ್ಷಣ ಪಾಲಿಕೆ ಈ ಶೆಡ್ ತೆರುವು ಕಾರ್ಯಾಚರಣೆಗೆ ಇಳಿಯಲೇ ಬೇಕು ಎಂದು ಮತ್ತೊಮ್ಮ ಆಗ್ರಹಿಸುತ್ತೇವೆ ಎಂದರು.
ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪರವಾಗಿ,
ಕೆ.ವಿ.ವಸಂತ ಕುಮಾರ್, ಪ್ರದಾನ ಕಾರ್ಯದರ್ಶಿ.
ಡಾ. ಎ. ಸತೀಶ್ ಕುಮಾರ್ ಶೆಟ್ಟಿ
ಸಂಘಟನಾ ಕಾರ್ಯದರ್ಶಿ