ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ದಸರಾ ಹಬ್ಬದ ಪ್ರಯುಕ್ತ ಮಹಿಳಾ ದಸರಾ ಕಾರ್ಯಕ್ರಮ ನಡೆಯಿತು. ರಂಗೋಲಿ ಸ್ಪರ್ಧೆ, ಥ್ರೋಬಾಲ್, ಹಗ್ಗಜಗ್ಗಾಟ ವಿಶೇಷ ಕ್ರೀಡೆಗಳು ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಮತ್ತು ಶ್ರೀಮತಿ ಅನುಪಮ ನೇತೃತ್ವದಲ್ಲಿ ನಡೆಯಿತು.

ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ಬಗೆಯ ರಂಗೋಲಿಯನ್ನ ಬಿಡಿಸಿ ಮಹಿಳೆಯರು ಗಮನ ಸೆಳೆದರು. ಸಿಂಪಲ್ ರಂಗೋಲಿ, ಈಜಿ ರಂಗೋಲಿ, 5 ಚುಕ್ಕಿ ರಂಗೋಲಿ ಹೀಗೆ ವಿವಿದ ಬಗ್ಗೆಯ ರಂಗೋಲಿಗಳನ್ನ ಇಲ್ಲಿ ಕಾಣಬಹುದಾಗಿದೆ. ವೀರಶೈವ ಕಲ್ಯಾಣ ಮಂದಿರದಲ್ಲಿ ರಂಗೋಲಿ ಸ್ಪರ್ಧೆ ನಡೆದಿದೆ. ಸ್ಪರ್ಧೆಯಲ್ಲಿ 48 ಜನ ಮಹಿಳೆಯರು ಭಾಗಿಯಾಗಿದ್ದಾರೆ.

ಮಹಿಳೆಯರ  ರೋಮ್ಯಾಂಟಿಕ್ ಹಾಡುಗಳು ಮತ್ತು ಡ್ಯಾನ್ಸ್ ಈ ವೇಳೆ ನಡೆದಿದೆ. ಚಳಿ ಚಳಿ ತಾಳೆನು ಈ ಚಳಿಯ ಹಾಡು, ಹಾಡಿರೋ ಹಾಡಿರೋ ಎಲ್ಲ ಸೇರಿ ಹಾಡಿರೋ ಎಂದು ಮಹಿಳೆಯರು ಕುಣಿದು ಸಕ್ಕತ್ ಸ್ಟೆಪ್ಸ್ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಇಡಿಯ ರೀತಿಯ ಕ್ರೀಡೆಗಳು ನಡೆದವು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *