ಶಿವಮೊಗ್ಗ ನಗರದ 77 ವರ್ಷ ವೃದ್ಧೆಯೊಬ್ಬರು ದಿನಾಂಕ 17ರಂದು ಸಂಜೆ ತಮ್ಮ ಮನೆಯ ಮುಂದಿನ ಗೇಟ್ ಹತ್ತಿರ ನಿಂತಿದ್ದಾ 4 ಜನ ಅಪರಿಚಿತ ಹುಡುಗರು ನೀರು ಕೇಳುವ ನೆಪದಲ್ಲಿ ಬಂದು ನೀರು ಕುಡಿದು ಏಕಾಏಕಿ ಮನೆಯೊಳಗೆ ನುಗ್ಗಿ ಮಹಿಳೆಯನ್ನು ತಳ್ಳಿ ಬಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ಮಹಿಳೆಯು ನೀಡಿದ ದೂರಿನ ಮೇರೆಗೆ ವಿನೋಬನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 207/2024 ಕಲಂ 309(6) BNS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಕಿತ್ತುಕೊಂಡು ಹೋದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಮತ್ತು ಶ್ರೀ ಕಾರಿಯಪ್ಪ ಎ, ಜಿ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-02 ಮಾರ್ಗದರ್ಶನದಲ್ಲಿ, ಶ್ರೀ ಸುರೇಶ್ ಎಂ, ಡಿ.ವೈ.ಎಸ್.ಪಿ ಶಿವಮೊಗ್ಗ – ಬಿ ಉಪ ವಿಭಾಗ ಮೇಲ್ವಿಚಾರಣೆಯಲ್ಲಿ, ಶ್ರೀ ಸಿದ್ದೇಗೌಡ ಪಿ.ಐ, ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ (ಪ್ರಭಾರ) ರವರ ನೇತೃತ್ವದ, ಶ್ರೀ ಸುನಿಲ್ ಬಿ.ಸಿ, ಪಿಎಸ್ಐ, ಹಾಗೂ ಸಿಬ್ಬಂಧಿಗಳಾದ ಸಿಪಿಸಿ ರಾಜು ಕೆ ಆರ್, ಚಂದ್ರನಾಯ್ಕ್, ಮಲ್ಲಪ್ಪ ಎಸ್.ಜಿ ಮತ್ತು ಅರುಣ ಕುಮಾರ್ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನಾಂಕ: 18-11-2024 ರಂದು ಪ್ರಕರಣದಲ್ಲಿ 04 ಜನ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದು, ಸದರಿಯವರಿಂದ ಮೇಲ್ಕಂಡ ಪ್ರಕರಣದಲ್ಲಿ ಕಿತ್ತುಕೊಂಡು ಹೋದ ಅಂದಾಜು ಮೌಲ್ಯ 65,000/- ರೂಗಳ 10 ಗ್ರಾಂ 700 ಮಿಲಿ ತೂಕದ ಚಿನ್ನದ ಸರವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.ತನಿಖಾ ತಂಡವು ಪ್ರಕರಣ ವರದಿಯಾದ ಕೇವಲ 24 ಗಂಟೆಗಳ ಒಳಗಾಗಿ ಸದರಿ ಪ್ರಕರಣವನ್ನು ಪತ್ತೆ ಮಾಡಿದ್ದು, ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *