ಮಂಜುನಾಥ್ ಶೆಟ್ಟಿ…

ಗೃಹಲಕ್ಷ್ಮಿ ಯೋಜನೆ 33 ನೇ ಕಂತಿನ ಹಣ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿದ್ದು ಎಲ್ಲಾ ಅರ್ಹ ಫಲಾನುಭವಿಗಳಿಗೂ ತಲಾ 2000 ರೂಪಾಯಿ ಯಂತೆ ಫಲಾನುಭವಿ ಗಳ ಬ್ಯಾಂಕ್ ಖಾತೆಗೆ ನೇರವಾಗಿ ಡಿ.ಬಿ.ಟಿ. ಮೂಲಕ ಜಮೆ ಆಗಿದೆ ಎಂದು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶ್ರೀ ಸಿ.ಎಸ್. ಚಂದ್ರಭೂಪಾಲ ರವರು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿಯ
ಪಂಚ ಗ್ಯಾರೆಂಟಿ ಯೋಜನೆಗಲ್ಲಿ ಒಂದಾದ
ಗೃಹಲಕ್ಷ್ಮಿ ಯೋಜನೆಯು ಪರಿಣಾಮಕಾರಿ ಯಾಗಿ ಅನುಷ್ಠಾನಗೊಂಡಿದ್ದು . ಇಲ್ಲಿಯ ವರೆಗೆ 32 ಕಂತುಗಳಲ್ಲಿ ಒಬ್ಬರಿಗೆ ಎರಡು ಸಾವಿರ ರೂಪಾಯಿಗಳಂತೆ ಒಟ್ಟು ರೂ 64‌ ಸಾವಿರ ರೂಪಾಯಿಗಳು ಫಲಾನುಭವಿಗಳ
ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗಿದೆ

ಶಿವಮೊಗ್ಗ ಜಿಲ್ಲೆಯಲ್ಲಿ 33 ನೇ ಕಂತಿನಲ್ಲಿ 3,78,031 ಅರ್ಹ ಮಹಿಳಾ ಫಲಾನುಭವಿ ಗಳಿದ್ದು‌ ರೂ 756,062,000 ಕೋಟಿ ರೂಪಾಯಿ ಸಂದಾಯ‌ವಾಗಿದ್ದು ಕರ್ನಾಟಕ ಸರ್ಕಾರದ ಸಾಧನೆಯಿಂದಾಗಿ ಗೃಹಲಕ್ಷ್ಮಿ ಫಲಾನುಭವಿ ಮನೆ ಒಡತಿಗೆ ನೀಡುತ್ತಿರುವ ಗೃಹಲಕ್ಷ್ಮಿ ಹಣ ಅವರಿಗೆ ವಿವಿಧರೀತಿಯಲ್ಲಿ ಸಹಕಾರಿಯಾಗಿದೆ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಯನ್ನು ಜಾರಿಗೆ ತಂದಿದೆ ಎಂದು ಸಿ. ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.

Leave a Reply

Your email address will not be published. Required fields are marked *