ಷಣ್ಮುಖಪ್ಪ ಎಸ್, 60 ವರ್ಷ, ಅಂತರಗಂಗೆ ಭದ್ರಾವತಿ
ರವರು BAJAJ CT-100 ಬೈಕ್ ನ್ನು ಭದ್ರಾವತಿ ಟೌನ್ ಬಿಳಕಿ ಕ್ರಾಸ್ ಹತ್ತಿರ ರೇಣುಕಾಂಭ ರೆಸ್ಟೋರೆಂಟ್ ಮುಂದೆ ನಿಲ್ಲಿಸಿದ್ದು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
.
ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0085/2024 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನೀಲ್ ಕುಮಾರ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ, ಶ್ರೀ ನಾಗರಾಜ್ ಪೊಲೀಸ್ ಉಪಾಧೀಕ್ಷರು ಭಧ್ರಾವತಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀಶೈಲ ಕುಮಾರ್ ಸಿಪಿಐ ನಗರ ವೃತ್ತ ರವರ ನೇತೃತ್ವದಲ್ಲಿ ಶ್ರೀ ಟಿ ರಮೇಶ ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆ ಮತ್ತು ಟಿ.ಪಿ ಮಂಜಪ್ಪ ಎ.ಎಸ್ ಐ ಹಾಗೂ ಸಿಬ್ಬಂಧಿಗಳಾದ ಸಿಹೆಚ್ ಸಿ ನವೀನ, ಸಿಪಿಸಿ ಪ್ರಸನ್ನ ಮತ್ತು ರಘು ಬಿ ಎಂ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು 28ರಂದು ಪ್ರಕರಣದ ಆರೋಪಿ 1) ನವೀನ ಕುಮಾರ್ ಎಂ ಬಿ, 32 ವರ್ಷ, ಎಲೆಕ್ಟ್ರಿಷಿಯನ್ ಕೆಲಸ, ಸುಗ್ಗಿಹಳ್ಳಿ ಹತ್ತಿರ, ಕೋಟೆ ಅಗ್ರಹಾರ ಸರ್ಕಲ್, ಚಿಕ್ಕಮಗಳೂರು ಟೌನ್ ಮತ್ತು 2) ಉಮ್ಮರ್ ಬೇಗ್, 26 ವರ್ಷ, ಗುಜುರಿ ವ್ಯಾಪಾರ, ಬಸ್ ಸ್ಟ್ಯಾಂಡ್ ಎದುರು ವೀರಾಪುರ ಗ್ರಾಮ ಭದ್ರಾವತಿ ಇವರುಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ. ಸದರಿ ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ ಆರೋಪಿ ನವೀನ ಈತನು ಭದ್ರಾವತಿ ಟೌನ್ ವ್ಯಾಪ್ತಿಯಲ್ಲಿ ಒಟ್ಟು 10 ಬೈಕ್ ಗಳನ್ನು ಕಳ್ಳತನ ಮಾಡಿದ್ದು, ಅದರಲ್ಲಿ 07 ಬೈಕ್ ಗಳನ್ನು ಪ್ರಕರಣದ ಇನ್ನೊಬ್ಬ ಆರೋಪಿ ಗುಜುರಿ ವ್ಯಾಪಾರಿಯಾದ ಉಮ್ಮರ್ ಬೇಗ್ ನಿಗೆ ಮಾರಾಟ ಮಾಡಿರುವುದು ತಿಳಿದು ಬಂದಿರುತ್ತದೆ. ನಂತರ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ 06, ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯ 03 ಮತ್ತು ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯ 01 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು 10 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ, ಸದರಿ ಆರೋಪಿತರಿಂದ ಅಂದಾಜು ಮೌಲ್ಯ 55,000/- ರೂಗಳ ಒಟ್ಟು 3 ದ್ವಿ ಚಕ್ರ ವಾಹನಗಳನ್ನು ಮತ್ತು 7 ದ್ವಿ ಚಕ್ರ ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡಿಗಳಿಸಿದ್ದ ರೂ 2,10,000/- ನಗದು ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 60,000/- ರೂಗಳ ಪಲ್ಸರ್ ಬೈಕ್ ಸೇರಿ ಒಟ್ಟು 3,25,000/- ರೂಗಳ ಮಾಲನ್ನು*
l ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.