ಮಂಜುನಾಥ್ ಶೆಟ್ಟಿ…

ಕರ್ನಾಟಕ ಸರ್ಕಾರದ 2026 27 ನೇ ಸಾಲಿನಲ್ಲಿ ಮಂಡಳಿಸಲಿರುವ ಬಜೆಟ್ ನಲ್ಲಿ ಶಿವಮೊಗ್ಗ ನಗರದ ತುರ್ತು ಯೋಜನೆಗಳಿಗೆ ಸಾಕಷ್ಟು ಹಣವನ್ನು ಒದಗಿಸಬೇಕೆಂದು ನಾಗರಿಕ ಹಿತರಕ್ಷಣ ವೇದಿಕೆಗಳು ಒಕ್ಕೂಟ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

ಶಿವಮೊಗ್ಗ ನೀರು ಸರಬರಾಜು ಘಟಕವು ಹಳೆಯದಾಗಿದ್ದು ಈ ಘಟಕದ ಸಾಮರ್ಥ್ಯವು ನಗರದ ನೀರಿನ ಅವಶ್ಯಕತೆಗಳನ್ನು ಪೂರೈಸುತ್ತಿಲ್ಲ ಆದ್ದರಿಂದ 50 ವರ್ಷಗಳ ನೀರಿನ ಅವಶ್ಯಕತೆಯನ್ನು ಜನಸಂಖ್ಯೆಗೆ ಅನುಗುಣವಾಗಿ ಪೂರೈಸ ಬೇಕೆಂದು ಒಕ್ಕೂಟ ಆಗ್ರಹಿಸಿದರು.

ನಗರದ ಯುಜಿಡಿಯ ಕೊಳಕು ನೀರು ತುಂಗಾ ನದಿಗೆ ನೇರವಾಗಿ ಸೇರುತ್ತಿದ್ದು ನದಿಯ ನೀರನ್ನು ಮಾನವ ಬಳಕೆಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದರಿಂದ ಈ ಬಾರಿ ಬಜೆಟ್ ನಲ್ಲಿ ಈ ಯೋಜನೆಗೆ ಅಗತ್ಯ ಹಣವನ್ನು ಒದಗಿಸಬೇಕು ಜನಸಂದನೆ ಮತ್ತು ವಾಹನ ಸಂಬಳ ಹೆಚ್ಚಗುತ್ತಿರುವುದರಿಂದ ಜೈಲ್ ರಸ್ತೆ ಕುವೆಂಪು ರಸ್ತೆ ವಿಜಯನಗರ ರಸ್ತೆ ಮೊದಲಾದ ಮುಖ್ಯ ರಸ್ತೆಗಳು ಅಗಲೀಕರಣಕ್ಕೆ ಬಜೆಟ್ ನಲ್ಲಿ ಹಣವನ್ನು ಒದಗಿಸಬೇಕೆಂದು ಸಂಘಟನೆ ಆಗ್ರಹಿಸಿದರು.

ಬೊಮ್ಮನಕಟ್ಟೆಯಲ್ಲಿ ರೈಲ್ವೆ ಅಂಡರ್ ಪಾಸ್ ಮಾರ್ಗವನ್ನು ಎರಡು ವರ್ಷಗಳ ಹಿಂದೆ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದರೂ ಇದುವರೆಗೆ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಮುಂದಿನ ಬಜೆಟ್ ನಲ್ಲಿ ಯೋಜನೆಗೆ ಸಾಕಷ್ಟು ಹಣವನ್ನು ಒದಗಿಸಬೇಕು ಸಂಚಾರ ಒದಗಿಸಲು ಮುಖ್ಯಮಂತ್ರಿಯವರು ಒದಗಿಸಬೇಕೆಂದ ಸಂಘಟನೆ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಸಂಘಟನಾ ಕಾರ್ಯದರ್ಶಿ ಡಾ  ಸತೀಶ್ ಕುಮಾರ್ ಶೆಟ್ಟಿ ಮುಂತಾದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *