ಮಂಜುನಾಥ್ ಶೆಟ್ಟಿ…
ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಎನ್ ,ಮಾಲತೇಶ್ ಹಾಗೂ ಕರವೇ ಜನಮನ ರಾಜ್ಯ ಸಂಘಟನೆ ರಾಜ್ಯಾಧ್ಯಕ್ಷರಾದ ಜನಾರ್ದನ್ ಸಾಲಿಯನ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆಯುವ ಪತ್ರಿಕಾ ವಿತರಕರ ಅಂತರಾಳದ ನಸುಕಿನ ನೊಗ ಎಂಬ ನಾಟಕದ ಪೋಸ್ಟರ್ ಅನಾವರಣ ಮಾಡಿದರು.
ಇದೇ ತಿಂಗಳು ತುಮಕೂರಿನಲ್ಲಿ ೩೦. ೧. ೨೦೨೬ (30.01.2026) ರಂದು ಯೋಗಕ್ಷೇಮ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಇವರ ಸಂಯುಕ್ತಾಕ್ಷರದಲ್ಲಿ ಪತ್ರಿಕಾ ವಿತರಕರ ಅಂತರಾಳದ ಬದುಕಿನ ನಸುಕಿನ ನೊಗ ಎಂಬ ನಾಟಕದ ಏಕವ್ಯಕ್ತಿ ರಂಗ ಪ್ರವೇಶ ತುಮಕೂರಿನಲ್ಲಿ ನಡೆಯುತ್ತಿದ್ದು ಗುಬ್ಬಿ ವೀರಣ್ಣ ಕಲಾ ಮಂದಿರ ಸಂಜೆ ೪(4) ಗಂಟೆಗೆ ನಡೆಯುತ್ತದೆ.
ಕಾರ್ಯಕ್ರಮವನ್ನು ಯಶಸ್ವಿಯಾಗಲೆಂದು ಹೆಚ್ಚಿನ ಸಂಖ್ಯೆಯಲ್ಲಿ ಪತ್ರಿಕಾ ವಿತರಕರರು ಭಾಗವಹಿಸಬೇಕೆಂದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಪರಶುರಾಮ್ ರಾವ್, ಭದ್ರಾವತಿ, ನಿರ್ದೇಶಕರು
ಹರ್ಷ ಎನ್.ಆರ್, ಪಾರ್ತಿಬನ್ . ಪಿ , ಕರವೇ ಜನಮನ ರಾಜ್ಯ ಸಂಘಟನೆಯ ಪದಾಧಿಕಾರಿಗಳಾದ ಸಿದ್ದಣ್ಣಯ್ಯ, ರಾಮು ರಾಗಿಗುಡ್ಡ, ಸಂಗಮೇಶ್, ರಾಮು ಸಿ, ರಾಮು ಹೆಚ್, ಇನ್ನು ಮುಂತಾದವರು ಭಾಗವಹಿಸಿದ್ದರು,